ADVERTISEMENT

'ನನ್ನ ಮತವು ನನ್ನ ಭವಿಷ್ಯ': ಚುನಾವಣಾ ಆಯೋಗದಿಂದ ರಾಷ್ಟ್ರಮಟ್ಟದ ಸ್ಪರ್ಧೆ

ಪಿಟಿಐ
Published 12 ಫೆಬ್ರುವರಿ 2022, 5:49 IST
Last Updated 12 ಫೆಬ್ರುವರಿ 2022, 5:49 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ನಾಗರಿಕರ ಪ್ರತಿಭೆ ಮತ್ತು ಸೃಜನಶೀಲತೆಗೆ ಉತ್ತೇಜನ ನೀಡಲು ಮತ್ತು ಚುನಾವಣಾ ಜಾಗೃತಿ ಮೂಡಿಸಲು ರಾಷ್ಟ್ರವ್ಯಾಪಿ ಸ್ಪರ್ಧೆ ಆಯೋಜಿಸಲು ಚುನಾವಣಾ ಆಯೋಗ ಮುಂದಾಗಿದೆ.

ನನ್ನ ಮತವು ನನ್ನ ಭವಿಷ್ಯ: ಒಂದು ಮತದ ಶಕ್ತಿ’ ಎಂಬ ಹೆಸರಿನಲ್ಲಿ ಸ್ಪರ್ಧೆ ನಡೆಯಲಿದೆ. ಸ್ಪರ್ಧೆಯಲ್ಲಿ ಐದು ವಿಭಾಗಗಳಿವೆ. ಕ್ವಿಜ್‌, ಘೋಷಣೆ, ಹಾಡು, ವಿಡಿಯೊ ಮತ್ತು ಪೋಸ್ಟರ್‌ ಸ್ಪರ್ಧೆಗಳನ್ನು ನಡೆಸಲಾಗುವುದು. ಸ್ಪರ್ಧೆಗೆ ಹೆಸರು ನೋಂದಾಯಿಸಲು ಫೆ.15 ಕೊನೆಯ ದಿನ ಎಂದು ದಹೆಲಿ ಮುಖ್ಯ ಚುನಾವಣಾಧಿಕಾರಿ ರಣಬೀರ್ ಸಿಂಗ್‌ ಹೇಳಿದ್ದಾರೆ.

ಎಲ್ಲ ವಿಭಾಗಗಳಲ್ಲಿಯೂ ಮೂವರು ವಿಜೇತರಿಗೆ ಆಕರ್ಷಕ ಬಹುಮಾನ ನೀಡಲಾಗುವುದು.ಕಲಾವಿದರು ಮತ್ತು ಹಾಡುಗಾರರು ಸಂಗೀತ ಉಪಕರಣಗಳನ್ನು ಬಳಸಲು ಅವಕಾಶ ಇದೆ. ಹಾಡುಗಳು 3 ನಿಮಿಷ ಮೀರುವಂತಿಲ್ಲ. ವಿಡಿಯೊ ಮಾಡುವವರು ಭಾರತದ ಚುನಾವಣೆಗಳ ವೈವಿಧ್ಯ, ಸಂಭ್ರಮವನ್ನು ಒಳಗೊಳ್ಳಲು ಯತ್ನಿಸಬೇಕು ಎಂದು ಅವರು ಸಲಹೆ ಕೊಟ್ಟಿದ್ದಾರೆ.ವಿಡಿಯೊ ಕಳುಹಿಸುವವರು ಒಂದು ನಿಮಿಷದ ಕಿರು ವಿಡಿಯೊ ಕಳುಹಿಸಿದರೆ ಉತ್ತಮ ಎಂದು ಸಿಂಗ್‌ ಹೇಳಿದ್ದಾರೆ.

ADVERTISEMENT

ಮತಗಟ್ಟೆ ಮಟ್ಟದ ಅಧಿಕಾರಿಗಳು ಸ್ಪರ್ಧೆಯ ಬಗ್ಗೆ ಜನರಿಗೆ ಮಾಹಿತಿ ದೊರೆಯುವಂತೆ ಮಾಡಬೇಕು ಎಂದು ಅವರು ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.