ADVERTISEMENT

ಸಾರಿಗೆ ಸಚಿವ ಗಡ್ಕರಿಗೆ ವಿರೋಧ ಪಕ್ಷಗಳ ನಾಯಕರ ಪ್ರಶಂಸೆ

ಪಿಟಿಐ
Published 21 ಮಾರ್ಚ್ 2022, 14:05 IST
Last Updated 21 ಮಾರ್ಚ್ 2022, 14:05 IST
ನಿತಿನ್‌ ಗಡ್ಕರಿ
ನಿತಿನ್‌ ಗಡ್ಕರಿ   

ನವದೆಹಲಿ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾಗಿ ನಿತಿನ್‌ ಗಡ್ಕರಿ ಅವರ ಕಾರ್ಯಗಳನ್ನು ಹಲವು ವಿರೋಧ ಪಕ್ಷಗಳು ಮುಖಂಡರು ಸೋಮವಾರ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಆದರೆ ರಸ್ತೆಗಳ ಗುಣಮಟ್ಟ, ನಿರ್ವಹಣೆ ಮತ್ತು ಟೋಲ್‌ ಸಂಗ್ರದಲ್ಲಿನ ಪಾರದರ್ಶಕತೆಯ ಕೊರತೆಯಂತಹ ಸಮಸ್ಯೆಗಳ ಬಗ್ಗೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದರು.

ಲೋಕಸಭೆಯಲ್ಲಿ 2022-23ರ ‘ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅನುದಾನದ ಬೇಡಿಕೆ’ ಕುರಿತ ಚರ್ಚೆಯಲ್ಲಿ ಭಾಗವಹಿಸಿದ ಪ್ರತಿಪಕ್ಷಗಳು ಮತ್ತು ಆಡಳಿತ ಪಕ್ಷದ ಬಹುತೇಕ ಸಂಸದರು ರಸ್ತೆ ಸಾರಿಗೆಯಲ್ಲಿ ಗಡ್ಕರಿ ಅವರು ಮಾಡಿದ ಕೆಲಸವನ್ನು ಶ್ಲಾಘಿಸುವ ಮೂಲಕ ತಮ್ಮ ಮಾತುಗಳನ್ನು ಪ್ರಾರಂಭಿಸಿದರು.

ADVERTISEMENT

ರಸ್ತೆಗಳ ಕಳ‍ಪೆ ಗುಣಮಟ್ಟದ ಬಗ್ಗೆ ವಿರೋಧ ಪಕ್ಷಗಳ ಹಲವು ಸಂಸದರು ಕಳವಳ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.