ADVERTISEMENT

ಇವಿಎಂ ಬಳಕೆ ನಿಲ್ಲಿಸಲು ‘ಸುಪ್ರೀಂ’ಗೆ ಅರ್ಜಿ

ಪಿಟಿಐ
Published 25 ನವೆಂಬರ್ 2020, 17:30 IST
Last Updated 25 ನವೆಂಬರ್ 2020, 17:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದಲ್ಲಿ ಮುಂದಿನ ದಿನಗಳಲ್ಲಿ ನಡೆಯುವ ಚುನಾವಣೆಯಲ್ಲಿ ಎಲೆಕ್ಟ್ರಾನಿಕ್‌ ವೋಟಿಂಗ್‌ ಮೆಷಿನ್‌(ಇವಿಎಂ) ಬದಲು ಮತಪತ್ರ ಬಳಸುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಬುಧವಾರ ಸುಪ್ರೀಂ ಕೋರ್ಟ್‌ಗೆ ವಕೀಲ ಸಿ.ಆರ್‌.ಜಯ ಸುಕಿನ್‌ ಎಂಬುವವರು ಅರ್ಜಿ ಸಲ್ಲಿಸಿದ್ದಾರೆ.

‘ಇವಿಎಂನಲ್ಲಿ ಹಲವು ದೋಷಗಳಿದ್ದು, ಹಲವು ರಾಷ್ಟ್ರಗಳು ಇದರ ಬಳಕೆಯನ್ನು ನಿಲ್ಲಿಸಿವೆ. ಮತಪತ್ರದ ಮುಖಾಂತರ ನಡೆಯುವ ಚುನಾವಣೆ ಪಾರದರ್ಶಕವಾಗಿದ್ದು, ಇವಿಎಂಗಳ ಬಳಕೆಯನ್ನು ದೇಶದಾದ್ಯಂತ ನಿಲ್ಲಿಸಬೇಕು. ಉತ್ಪಾದನೆ ವೇಳೆಯೇ ಇವಿಎಂಗಳನ್ನು ದುರ್ಬಳಕೆ ಮಾಡಿಕೊಳ್ಳಬಹುದು. ಹೀಗಿದ್ದಾಗ ಮತದಾನದ ಬಳಿಕ ಇವುಗಳನ್ನು ಹ್ಯಾಕ್‌ ಮಾಡುವ ಅವಶ್ಯಕತೆ ಇರುವುದಿಲ್ಲ. ವಿಶ್ವದ ಯಾವುದೇ ರಾಷ್ಟ್ರಗಳಲ್ಲಿ ಮಾಡಿದ ಇವಿಎಂಗಳು ದೋಷಾತೀತವಲ್ಲ’ ಎಂದು ಅವರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT