ADVERTISEMENT

ಕುಲ್‍ಗಾಂನಲ್ಲಿ ಉಗ್ರರಿಂದ ಅಪಹರಣಕ್ಕೊಳಗಾದ ಪೊಲೀಸ್ ಶವವಾಗಿ ಪತ್ತೆ

​ಪ್ರಜಾವಾಣಿ ವಾರ್ತೆ
Published 21 ಜುಲೈ 2018, 15:55 IST
Last Updated 21 ಜುಲೈ 2018, 15:55 IST
ಕೃಪೆ: ಕಾಶ್ಮೀರ ಪೊಲೀಸ್ ಟ್ವಿಟರ್ ಖಾತೆ
ಕೃಪೆ: ಕಾಶ್ಮೀರ ಪೊಲೀಸ್ ಟ್ವಿಟರ್ ಖಾತೆ   

ಶ್ರೀನಗರ: ದಕ್ಷಿಣ ಕಾಶ್ಮೀರದ ಕುಲ್‍ಗಾಂ ಜಿಲ್ಲೆಯಲ್ಲಿ ಕಳೆದ ರಾತ್ರಿ ಉಗ್ರರಿಂದ ಅಪಹರಣಕ್ಕೊಳಗಾಗಿದ್ದ ಜಮ್ಮು ಕಾಶ್ಮೀರದ ಪೊಲೀಸ್ ಕಾನ್‌ಸ್ಟೇಬಲ್ ಶವವಾಗಿ ಪತ್ತೆಯಾಗಿದ್ದಾರೆ.

ಶನಿವಾರ ಸಂಜೆ ಪೊಲೀಸ್ ಮೃತದೇಹ ಪತ್ತೆಯಾಗಿದೆ ಎಂದು ಬಲ್ಲಮೂಲಗಳು ವರದಿ ಮಾಡಿವೆ.

ಜಮ್ಮುವಿನ ಕಠುವಾದಲ್ಲಿ ತರಬೇತಿ ಪಡೆಯುತ್ತಿದ್ದ ಈ ಪೊಲೀಸ್ ರಜೆಯಲ್ಲಿದ್ದರು.ಉಗ್ರರಿಂದ ಅಪಹರಿಸಲ್ಪಟ್ಟ ಈ ಪೊಲೀಸ್‍ಗಾಗಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದರೂ ಸಫಲವಾಗಲಿಲ್ಲ.

ADVERTISEMENT

ಒಂದು ತಿಂಗಳ ಹಿಂದೆ ದಕ್ಷಿಣ ಕಾಶ್ಮೀರದಲ್ಲಿ ಯೋಧರೊಬ್ಬರನ್ನು ಅಪಹರಿಸಿ ಉಗ್ರರು ಹತ್ಯೆ ಮಾಡಿದ್ದರು, ರಾಷ್ಟ್ರೀಯ ರೈಫಲ್‍ನ ಯೋಧ ಔರಂಗಜೇಬ್ ಈದ್ ಆಚರಣೆಗಾಗಿ ಮನೆಗೆ ಬರುತ್ತಿದ್ದಾಗ ಉಗ್ರರು ಅಪಹರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.