ADVERTISEMENT

ಕೇರಳ: ಪ್ರಿಯಾಂಕಾ ಗಾಂಧಿ ‘ಕಾಣೆಯಾಗಿದ್ದಾರೆ’ ಎಂದು ದೂರು ದಾಖಲಿಸಿದ ಬಿಜೆಪಿ

ಪಿಟಿಐ
Published 11 ಆಗಸ್ಟ್ 2025, 13:08 IST
Last Updated 11 ಆಗಸ್ಟ್ 2025, 13:08 IST
   

ವಯನಾಡ್: ಸಂಸದೆ ಪ್ರಿಯಾಂಕಾ ಗಾಂಧಿ ಅವರು ಮೂರು ತಿಂಗಳಿನಿಂದ ‘ಕಾಣೆಯಾಗಿದ್ದಾರೆ’ ಎಂದು ಬಿಜೆಪಿ ನಾಯಕರೊಬ್ಬರು ಸೋಮವಾರ ದೂರು ದಾಖಲಿಸಿದ್ದಾರೆ.

ಬಿಜೆಪಿಯ ಪರಿಶಿಷ್ಟ ಪಂಗಡ ಮೋರ್ಚಾದ ಅಧ್ಯಕ್ಷ ಪಲ್ಲಿಯಾರ ಮುಕುಂದನ್ ಅವರು ವಯನಾಡ್ ಜಿಲ್ಲಾ ಪೊಲೀಸ್ ಮುಖ್ಯಸ್ಥರಿಗೆ ದೂರು ನೀಡಿದ್ದಾರೆ.

ವಯನಾಡ್‌ ಸಂಸದೆ ಪ್ರಿಯಾಂಕಾ ಗಾಂಧಿ ಅವರು ಕಳೆದ ಮೂರು ತಿಂಗಳಿನಿಂದ ವಯನಾಡ್‌ಗೆ ಆಗಮಿಸಿಲ್ಲ. ಭೂಕುಸಿತವಾಗಿರುವ ಚೂರಲ್‌ಮಲ - ಮುಂಡಕ್ಕೈ ಪ್ರದೇಶಕ್ಕೆ ಕೂಡ ಭೇಟಿ ನೀಡಿಲ್ಲ. ಬುಡಕಟ್ಟು ಜನರ ಸಮಸ್ಯೆಗಳಿಗೆ ಕಿವಿಯಾಗುತ್ತಿಲ್ಲ ಎಂದು ಮುಕುಂದನ್ ಆರೋಪಿಸಿದ್ದಾರೆ.

ADVERTISEMENT

ಕೇರಳ ವಿದ್ಯಾರ್ಥಿಗಳ ಒಕ್ಕೂಟದ(ಕೆಎಸ್‌ಯು) ಜಿಲ್ಲಾಧ್ಯಕ್ಷ ಗೋಕುಲ್‌ ಗುರುವಾಯೂರು ಅವರು ಕೇಂದ್ರ ಸಚಿವ ಹಾಗೂ ಸಂಸದ ಸುರೇಶ್‌ ಗೋಪಿ ಅವರು ಕಾಣೆಯಾಗಿದ್ದಾರೆ ಎಂದು ಭಾನುವಾರ ದೂರು ದಾಖಲಿಸಿದ್ದರು. ಸುರೇಶ್‌ ಗೋಪಿ ಅವರು ಕ್ಷೇತ್ರದ ಜನರಿಗೆ ಸಿಗುತ್ತಿಲ್ಲ ಎಂದು ಆರೋಪಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.