ADVERTISEMENT

ಭಾರತ– ಚೀನಾ ಗಡಿ ವಿಚಾರ: ಪ್ರಧಾನಿ ಮೌನ ಪ್ರಶ್ನಿಸಿದ ರಾಹುಲ್

ಪಿಟಿಐ
Published 10 ಜೂನ್ 2020, 6:52 IST
Last Updated 10 ಜೂನ್ 2020, 6:52 IST
ರಾಹುಲ್ ಗಾಂಧಿ
ರಾಹುಲ್ ಗಾಂಧಿ   

ನವದೆಹಲಿ: ಲಡಾಖ್‌ ಭಾಗದಲ್ಲಿ ಭಾರತದ ಭೂ ಪ್ರದೇಶವನ್ನು ಚೀನಾ ವಶಕ್ಕೆ ಪಡೆದಿದೆ ಎಂದು ಆರೋಪಿಸಿರುವ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ, ಈ ವಿಷಯದಲ್ಲಿ ಪ್ರಧಾನಿ ಮೌನವಾಗಿರುವುದು ಏಕೆ ಎಂದು ಪ್ರಶ್ನೆ ಮಾಡಿದ್ದಾರೆ.

‘ಚೀನಿಯರು ಲಡಾಖ್‌ನಲ್ಲಿ ಗಡಿಯೊಳಗೆ ನುಗ್ಗಿ ನಮಗೆ ಸೇರಿದ ಭೂ ಪ್ರದೇಶವನ್ನು ವಶಕ್ಕೆ ಪಡೆದಿದ್ದಾರೆ. ಆದರೆ ಈ ವಿಷಯದಲ್ಲಿ ಪ್ರಧಾನಿ ಸಂಪೂರ್ಣವಾಗಿ ಮೌನ ಮೆರೆದಿದ್ದಾರೆ. ಅವರು ಈ ವಿಚಾರದಿಂದ ದೂರಸರಿದಿದ್ದಾರೆ’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ಉಭಯ ದೇಶದ ಮಿಲಿಟರಿ ಮಾತುಕತೆ ವೇಳೆ ಚೀನಾದ ಬಿಗಿ ನಿಲುವನ್ನು ಮತ್ತು ಗಲ್ವಾನ್‌ ಕಣಿವೆ ಮತ್ತು ಪಾಂಗಾಂಗ್‌ ತ್ಸೊದ ಕೆಲ ಭಾಗಗಳನ್ನು ತನಗೆ ಸೇರಿದೆ ಚೀನಾ ಪ್ರತಿಪಾದಿಸಿದೆ ಎನ್ನುವ ಪತ್ರಿಕಾ ವರದಿಯೊಂದನ್ನು ಅವರು ಟ್ಯಾಗ್‌ ಮಾಡಿದ್ದಾರೆ.

ADVERTISEMENT

ಗಡಿ ವಿಷಯದಲ್ಲಿ ಏನು ನಡೆದಿದೆ ಮತ್ತು ಲಡಾಕ್‌ನ ಕೆಲ ಭಾಗಗಳನ್ನು ಚೀನಾ ಅತಿಕ್ರಮಣ ಮಾಡಿದೆಯೇ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ನೀಡಬೇಕು ಎಂದು ಅವರು ಕೇಂದ್ರವನ್ನು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.