ADVERTISEMENT

ಡಿ.31ರ ಒಳಗಾಗಿ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಎಲ್‌ಇಡಿ ಬಲ್ಬ್‌ಗಳ ಅಳವಡಿಕೆ

ಪಿಟಿಐ
Published 15 ಡಿಸೆಂಬರ್ 2018, 11:06 IST
Last Updated 15 ಡಿಸೆಂಬರ್ 2018, 11:06 IST
ಎಲ್‌ಇಡಿ ಬಲ್ಬ್‌
ಎಲ್‌ಇಡಿ ಬಲ್ಬ್‌   

ನವದೆಹಲಿ: ಈ ವರ್ಷಾಂತ್ಯದ ಒಳಗಾಗಿ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಈಗಿರುವ ಬಲ್ಬ್‌ಗಳ ಬದಲಾಗಿ ಎಲ್‌ಇಡಿಗೆ ಪರಿವರ್ತಿಸುವಂತೆಕೇಂದ್ರ ಲೋಕೋಪಯೋಗಿ ಇಲಾಖೆ (ಸಿಪಿಡಬ್ಲ್ಯೂಡಿ) ಎಲ್ಲ ಅಧಿಕಾರಿಗಳಿಗೂ ಸೂಚನೆ ನೀಡಿದೆ.

ಕೇಂದ್ರ ವಸತಿ ಹಾಗೂ ನಗರಾಭಿವೃದ್ಧಿ ಇಲಾಖೆಯ ಅಡಿಯಲ್ಲಿ ಕೇಂದ್ರ ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಹಿಸುತ್ತದೆ. ಇದರ ವ್ಯಾಪ್ತಿಗೆ ಒಳಪಡುವ 1,241 ಕಟ್ಟಡಗಳಲ್ಲಿ ಆದಷ್ಟು ಬೇಗ ಈ ಕೆಲಸ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದೆ. ಈಗಾಗಲೇ 223 ಕಟ್ಟಡಗಳಲ್ಲಿ ಎಲ್‌ಇಡಿಗೆ ಪರಿವರ್ತಿಸುವ ಕೆಲಸ ಪೂರ್ಣಗೊಂಡಿದ್ದು, 230 ಕಟ್ಟಡಗಳಲ್ಲಿ ಕೆಲಸ ನಡೆಯುತ್ತಿದೆ.

ಕೇಂದ್ರ ಸರ್ಕಾರದ ಎಲ್ಲ ಕಟ್ಟಡಗಳ ನಿರ್ವಹಣೆ ಹಾಗೂ ಅಂತರರಾಷ್ಟ್ರೀಯ ಗಡಿಗಳಲ್ಲಿ ಬೇಲಿ ಹಾಕುವ ಕೆಲಸವನ್ನು ಸಿಪಿಡಬ್ಲ್ಯೂಡಿ ನಿರ್ವಹಿಸುತ್ತದೆ. ಇದಲ್ಲದೇ, ಸ್ನೇಹಹಸ್ತ ಕಾರ್ಯಕ್ರಮಗಳ ಅಡಿಯಲ್ಲಿ ವಿದೇಶಗಳಲ್ಲಿ ಕೂಡ ಭಾರತ ಸರ್ಕಾರದ ನೆರವಿನೊಂದಿಗೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುತ್ತದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.