ADVERTISEMENT

ಫಿಲಂ, ಟೆಲಿವಿಷನ್‌ ಇನ್‌ಸ್ಟಿಟ್ಯೂಟ್‌ನ ಮಾಜಿ ಮುಖ್ಯಸ್ಥ ರೋಷನ್ ತನೇಜಾ ನಿಧನ

​ಪ್ರಜಾವಾಣಿ ವಾರ್ತೆ
Published 11 ಮೇ 2019, 18:33 IST
Last Updated 11 ಮೇ 2019, 18:33 IST
ರೋಷನ್‌
ರೋಷನ್‌   

ಮುಂಬೈ: ಪುಣೆಯ ಫಿಲಂ ಮತ್ತು ಟೆಲಿವಿಷನ್‌ ಇನ್‌ಸ್ಟಿಟ್ಯೂಟ್‌ನ ಅಭಿನಯ ವಿಭಾಗದ ಮಾಜಿ ಮುಖ್ಯಸ್ಥ ರೋಷನ್ ತನೇಜಾ (87) ಶುಕ್ರವಾರ ರಾತ್ರಿ ನಿಧನರಾದರು.

ಅವರಿಗೆ ಪತ್ನಿ ಮಿಥಿಕಾ ಮತ್ತು ಇಬ್ಬರು ಪುತ್ರರು ಇದ್ದಾರೆ. ಮೆದೋಜೀರಕ ಗ್ರಂಥಿಯ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಸಾಂತಾಕ್ರೂಜ್‌ನ ಸ್ವಗೃಹದಲ್ಲಿ ಮೃತಪಟ್ಟರು.ಶನಿವಾರ ಪಶ್ಚಿಮ ಸಾಂತಾಕ್ರೂಜ್‌ನ ವಿದ್ಯುತ್‌ ಚಿತಾಗಾರದಲ್ಲಿಅಂತ್ಯಸಂಸ್ಕಾರ ನೆರವೇರಿತು.

ಫುಣೆಯ ಎಫ್‌ಟಿಐಐನಲ್ಲಿಬಾಲಿವುಡ್‌ ನಟರಾದ ಶಬಾನಾ ಆಜ್ಮಿ, ನಾಸಿರುದ್ದೀನ್ ಶಾ, ಓಂ ಪುರಿ, ರಣಬೀರ್‌ ಕಪೂರ್‌, ಅನಿಲ್‌ ಕಪೂರ್‌, ರಾಕೇಶ್ ಬೇಡಿ ಸೇರಿದಂತೆ ಹಲವರಿಗೆ ನಟನೆಯ ಪಾಠಗಳನ್ನು ಕಲಿಸಿದ್ದರು.

ADVERTISEMENT

ಶಬಾನ ಆಜ್ಮಿ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ತೀವ್ರ ಸಂತಾಪ ಸೂಚಿಸಿದ್ದು, ‘ರೋಷನ್‌ ತನೇಜಾ ನನ್ನ ಗುರು. ಅವರ ಹೊರತು ಮತ್ತಾರ ಪಾದಕ್ಕೂ ನಮಸ್ಕರಿಸಿಲ್ಲ. ನಟನೆಯ ಪಾಠಗಳನ್ನು ಅವರಿಂದ ಕಲಿತದ್ದು ನನ್ನ ಭಾಗ್ಯವೇ ಸರಿ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.