ADVERTISEMENT

ಲಲಿತ್‌ ಮೋದಿ–ತಾಯಿ ನಡುವಿನ ಆಸ್ತಿ ವಿವಾದ ಮಧ್ಯಸ್ಥಿಕೆಗೆ ಆರ್‌.ವಿ. ರವೀಂದ್ರನ್‌

ಪಿಟಿಐ
Published 1 ಆಗಸ್ಟ್ 2022, 14:49 IST
Last Updated 1 ಆಗಸ್ಟ್ 2022, 14:49 IST
   

ನವದೆಹಲಿ: ಉದ್ಯಮಿ ಲಲಿತ್‌ ಮೋದಿ ಹಾಗೂ ಅವರ ತಾಯಿ ಬಿನಾ ಮೋದಿ ಅವರ ನಡುವಿನ ಆಸ್ತಿ ವಿವಾದವನ್ನು ಬಗೆಹರಿಸಲು ಮಧ್ಯಸ್ಥಿಕೆ ವಹಿಸುವಂತೆಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಆರ್‌.ವಿ. ರವೀಂದ್ರನ್‌ ಅವರನ್ನು ಸುಪ್ರೀಂ ಕೋರ್ಟ್‌ ಸೋಮವಾರ ನೇಮಿಸಿದೆ.

ಮಧ್ಯಸ್ಥಿಕೆಯ ಮೂಲಕ ವಿವಾದವನ್ನು ಬಗೆಹರಿಸಿಕೊಳ್ಳಬಹುದು ಎಂದು ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ಅವರಿದ್ದ ಪೀಠ ಅಭಿಪ್ರಾಯಪಟ್ಟಿದ್ದು, ಇದಕ್ಕೆ ಇಬ್ಬರೂ ಒಪ್ಪಿದ್ದಾರೆ.

ಮಧ್ಯಸ್ಥಿಕೆ ವಹಿಸುವಂತೆ ನಿವೃತ್ತ ನ್ಯಾಯಮೂರ್ತಿ ವಿಕ್ರಮಜಿತ್‌ ಸೇನ್‌ ಮತ್ತು ಕುರಿಯನ್‌ ಜೋಸೆಫ್‌ ಅವರನ್ನು ಡಿಸೆಂಬರ್‌ 16ರಂದು ಸುಪ್ರೀಂ ಕೋರ್ಟ್‌ ನೇಮಿಸಿತ್ತು. ಆದರೆ, ಈ ಪ್ರಯತ್ನವು ಫಲಪ್ರದವಾಗಲಿಲ್ಲ ಎಂದು ಜುಲೈ 28ರಂದು ಎರಡೂ ಕಡೆಯವರು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದರು.‌

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.