ADVERTISEMENT

ಸಂಜ್ಞೆಯ ಭಾಷಾ ವ್ಯಾಖ್ಯಾನಕಾರರಿಗೆ ಅವಕಾಶ; ಕೇಂದ್ರಕ್ಕೆ ಸುಪ್ರೀಂ ನೋಟಿಸ್‌

ಸರ್ಕಾರದ ಪತ್ರಿಕಾಗೋಷ್ಠಿ

ಪಿಟಿಐ
Published 3 ಮೇ 2022, 14:04 IST
Last Updated 3 ಮೇ 2022, 14:04 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ:ಪ್ರಧಾನಿ, ಕೇಂದ್ರ ಸಚಿವರು ಮತ್ತು ಇತರರು ನಡೆಸುವ ಅಧಿಕೃತ ಪತ್ರಿಕಾಗೋಷ್ಠಿಯಲ್ಲಿ ಸಂಜ್ಞೆಯ ಭಾಷಾ ವ್ಯಾಖ್ಯಾನಕಾರರನ್ನು ಒದಗಿಸುವಂತೆ ನಿರ್ದೇಶನ ನೀಡಲು ಕೋರಿ ಸಲ್ಲಿಸಲಾದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರ ಮತ್ತು ಇತರರಿಗೆ ನೊಟೀಸ್‌ ನೀಡಿದೆ.

ಅಂಗವಿಕಲರಿಗೆ ಮಾಹಿತಿ ಮತ್ತು ಸಂವಹನಕ್ಕೆ ಸಮಾನ ಹಕ್ಕಿದೆ ಎಂದು ವಕೀಲ ಎಂ.ಕರ್ಪಗಂ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್‌.ಎ.ನಜೀರ್‌ ಮತ್ತು ವಿಕ್ರಮ್‌ ನಾಥ್‌ ಅವರಿದ್ದ ನ್ಯಾಯಪೀಠ, ಈ ಕುರಿತು ಪ್ರತಿಕ್ರಿಯೆ ಕೇಳಿದೆ.

ಕರ್ಪಗಂ ಅವರು ಅಂಗವಿಕಲರ ಕಾಯ್ದೆ–2016ರ ಅಡಿಯಲ್ಲಿ ವ್ಯಕ್ತಿಗಳ ಹಕ್ಕುಗಳಿಗೆ ಅನುಗುಣವಾಗಿ ಪ್ರಧಾನಿ, ಕೇಂದ್ರ ಸಚಿವರು, ಮುಖ್ಯಮಂತ್ರಿಗಳು ಮತ್ತು ರಾಜ್ಯ ಸರ್ಕಾರಗಳ ಸಚಿವರು ನಡೆಸುವ ಎಲ್ಲಾ ಅಧಿಕೃತ ಪತ್ರಿಕಾಗೋಷ್ಠಿಗಳಲ್ಲಿ ಸಂಜ್ಞೆಯ ಭಾಷಾ ವ್ಯಾಖ್ಯಾನಕಾರರನ್ನು ಹೊಂದಲು ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.