ನವದೆಹಲಿ: ಬಾಂಗ್ಲಾದೇಶದ ಜಿಡಿಪಿಯು ಭಾರತದ ಜಿಡಿಪಿಗೆ ಹತ್ತಿರವಾಗುತ್ತಿದೆ ಎಂಬುದು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯ (ಐಎಂಎಫ್) ವರದಿಯಿಂದ ತಿಳಿದುಬಂದಿದೆ. ಇದುಆರು ವರ್ಷಗಳಲ್ಲಿ ಬಿಜೆಪಿ ಸರ್ಕಾರದ ‘ದ್ವೇಷ ತುಂಬಿದ ಸಾಂಸ್ಕೃತಿಕ ರಾಷ್ಟ್ರೀಯತೆಯ’ ಬಹುದೊಡ್ಡ ಸಾಧನೆಯಾಗಿದೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.
‘ಈ ವರ್ಷ ಬಾಂಗ್ಲಾದೇಶವು ಜಿಡಿಪಿಯಲ್ಲಿ ಪ್ರಗತಿ ಸಾಧಿಸಿದೆ. ಅದರ ಜೆಡಿಪಿಯು ಭಾರತದ ಜಿಡಿಪಿಯ ಸಮೀಪದಲ್ಲಿದೆ. ಸ್ವಲ್ಪ ದಿನಗಳಲ್ಲಿ ಬಾಂಗ್ಲಾದೇಶವು ಜೆಡಿಪಿಯಲ್ಲಿ ಭಾರತವನ್ನು ಹಿಂದಿಕ್ಕಲಿದೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಐಎಂಎಫ್ ವರದಿ ಆಧಾರದಲ್ಲಿ ಸಿದ್ಧಪಡಿಸಿದ ಗ್ರಾಫ್ ಅನ್ನು ಅವರು ಟ್ವೀಟ್‌ನಲ್ಲಿ ಹಂಚಿಕೊಂಡಿದ್ದಾರೆ.
ಕೋವಿಡ್ ಬಿಕ್ಕಟ್ಟಿನಿಂದಾಗಿ ಭಾರತದ ಆರ್ಥಿಕತೆ ಕುಸಿಯುತ್ತಿದೆ. ಈ ವರ್ಷ ಆರ್ಥಿಕತೆಯು ಶೇ 10.3ರಷ್ಟು ಕುಸಿತವಾಗಲಿದೆ. ಆದರೆ 2021ರಲ್ಲಿ ಚೇತರಿಕೆ ಹಾದಿಗೆ ಮರಳಲಿದ್ದು, ಶೇ 8.8 ದರದಲ್ಲಿ ಬೆಳವಣಿಗೆ ಸಾಧಿಸಲಿದೆ ಎಂದು ಐಎಂಎಫ್ ಅಂದಾಜಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.