ನವದೆಹಲಿ: ಸಿಬ್ಬಂದಿ ನೇಮಕಾತಿ ಆಯೋಗವು(ಸ್ಟಾಫ್ ಸೆಲೆಕ್ಷನ್ ಕಮಿಷನ್) ಪರೀಕ್ಷೆ ನಡೆಸುವ ತನ್ನ ಬದ್ಧತೆಯಿಂದ ವಿಮುಖವಾಗುವುದಕ್ಕೆ ಯಾವ ಕಾರಣಕ್ಕೂ ಅವಕಾಶ ಮಾಡಿಕೊಡಬಾರದು ಎಂದು ಸಂಸದೀಯ ಸಮಿತಿಯೊಂದು ಆಯೋಗವನ್ನು ಕೇಳಿಕೊಂಡಿದೆ.
ಸಿಬ್ಬಂದಿ ನೇಮಕಾತಿ ಆಯೋಗದ ಪ್ರಕ್ರಿಯೆಗಳು ಗಣಕೀಕೃತಗೊಂಡಿದ್ದು, ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ವಿಧಾನದಲ್ಲಿ ಪರಿಶೀಲನೆ ನಡೆಸಬಹುದು. ಈ ಮೂಲಕ ಪರೀಕ್ಷೆ ಪ್ರಕ್ರಿಯೆಯು ಸುರಕ್ಷಿತ, ನಕಲು ರಹಿತ ಹಾಗೂ ಸೈಬರ್‌ದಾಳಿಯನ್ನು ಸಮರ್ಪಕವಾಗಿ ತಡೆಯಬಹುದು ಎಂದು ಸಮಿತಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.