ADVERTISEMENT

ಸ್ಟೀಲ್ ಕಂಪನಿಗಳಿಂದ ಕೋವಿಡ್ ರೋಗಿಗಳಿಗೆ 10,000 ಆಮ್ಲಜನಕಯುಕ್ತ ಹಾಸಿಗೆ ವ್ಯವಸ್ಥೆ

ಪಿಟಿಐ
Published 1 ಮೇ 2021, 11:26 IST
Last Updated 1 ಮೇ 2021, 11:26 IST
ರಾಯಿಟರ್ಸ್ ಚಿತ್ರ
ರಾಯಿಟರ್ಸ್ ಚಿತ್ರ   

ನವದೆಹಲಿ: ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಲು 10,000 ಆಮ್ಲಜನಕಯುಕ್ತ ಹಾಸಿಗೆಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಸ್ಟೀಲ್ ಕಂಪನಿಗಳಿಗೆ ನಿರ್ದೇಶನ ನೀಡಿದೆ.

5,000 ಹಾಸಿಗೆಗಳನ್ನು ಸರ್ಕಾರಿ ಸ್ವಾಮ್ಯದ ಕಂಪನಿಗಳು ಸ್ಥಾಪಿಸಿದರೆ, ಇನ್ನುಳಿದ 5,000 ಹಾಸಿಗೆಗಳನ್ನು ಟಾಟಾ ಸ್ಟೀಲ್, ಜೆಎಸ್‌ಪಿಎಲ್, ಜೆಎಸ್‌ಡಬ್ಲ್ಯೂ ಸ್ಟೀಲ್ ಮತ್ತು ಎಎಂಎನ್ಎಸ್ ಇಂಡಿಯಾದಂತಹ ಖಾಸಗಿ ಕಂಪನಿಗಳು ಸ್ಥಾಪಿಸಲಿವೆ ಎಂದು ಉಕ್ಕು ಸಚಿವ ಧರ್ಮೇಂದ್ರ ಪ್ರಧಾನ್ ಶುಕ್ರವಾರ ತಿಳಿಸಿದ್ದಾರೆ.

ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವಲ್ಲಿ ಉಕ್ಕಿನ ಉದ್ಯಮದ ಕೊಡುಗೆಯನ್ನು ಹೆಚ್ಚಿಸುವ ಕುರಿತು ಸಾರ್ವಜನಿಕ ಮತ್ತು ಖಾಸಗಿ ವಲಯಗಳ ಉಕ್ಕಿನ ಉದ್ಯಮಗಳ ಮುಖಂಡರೊಂದಿಗೆ ನಡೆದ ಸರಣಿ ಸಭೆಗಳ ಬಗ್ಗೆ ಸಚಿವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ADVERTISEMENT

ಆಮ್ಲಜನಕ ಕೇಂದ್ರಗಳಿಂದ ನೇರವಾಗಿ ಆಸ್ಪತ್ರೆಗಳಿಗೆ ಆಮ್ಲಜನಕವನ್ನು ಪೂರೈಸುವುದು ಸೇರಿದಂತೆ ಉಕ್ಕಿನ ಸ್ಥಾವರಗಳಿಂದ ದ್ರವ ವೈದ್ಯಕೀಯ ಆಮ್ಲಜನಕದ ಪೂರೈಕೆಯನ್ನು ಹೆಚ್ಚಿಸಲು ಸಾಧ್ಯವಾದಷ್ಟು ನೆರವು ನೀಡಲು ಕಂಪನಿಗಳಿಗೆ ಸೂಚಿಸಲಾಗಿದೆ.

ಸರ್ಕಾರಿ ಸ್ವಾಮ್ಯದ ಎಸ್‌ಐಎಲ್ ಮತ್ತು ಆರ್‌ಐಎನ್‌ಎಲ್ ಮತ್ತು ಖಾಸಗಿ ಕಂಪನಿಗಳಾದ ಟಾಟಾ ಸ್ಟೀಲ್, ಜೆಎಸ್‌ಡಬ್ಲ್ಯೂ ಸ್ಟೀಲ್, ಜೆಎಸ್‌ಪಿಎಲ್ ಮತ್ತು ಎಎಂಎನ್‌ಎಸ್ ಇಂಡಿಯಾ ದೇಶದಾದ್ಯಂತ ವಿವಿಧ ಆರೋಗ್ಯ ಕೇಂದ್ರಗಳಿಗೆ ಆಮ್ಲಜನಕವನ್ನು ಪೂರೈಸುತ್ತಿವೆ.

ಸಚಿವಾಲಯದ ಪ್ರಕಾರ, ಸ್ಟೀಲ್ ಪ್ಲಾಂಟ್‌ಗಳು ಗುರುವಾರ ಆಸ್ಪತ್ರೆಗಳಿಗೆ 3,390 ಟನ್ ವೈದ್ಯಕೀಯ ಆಮ್ಲಜನಕವನ್ನು ಪೂರೈಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.