ADVERTISEMENT

ಉಗ್ರ ಸಂಘಟನೆ ಸೇರುವವರ ಸಂಖ್ಯೆ ಇಳಿಕೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2020, 4:45 IST
Last Updated 10 ಫೆಬ್ರುವರಿ 2020, 4:45 IST
   

ಶ್ರೀನಗರ:ಸಂವಿಧಾನದ370ನೇ ವಿಧಿ ರದ್ದುಗೊಳಿಸಿದ ನಂತರ ಉಗ್ರ ಸಂಘಟನೆಗಳನ್ನು ಸೇರುತ್ತಿರುವ ಸ್ಥಳೀಯ ಯುವಕರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ ಎಂದು ವರದಿಯೊಂದು ಹೇಳಿದೆ.

‌ಜಮ್ಮು ಮತ್ತು ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಆಗಸ್ಟ್‌5ರ ನಂತರ ಪ್ರತಿ ತಿಂಗಳು ಉಗ್ರ ಸಂಘಟನೆಗೆ ಸೇರುವವರ ಸಂಖ್ಯೆ5ಕ್ಕೆ ಇಳಿದಿದೆ.ಇದಕ್ಕೂ ಮುನ್ನ ಸಂಘಟನೆಗೆ ಸೇರುವವರ ಸಂಖ್ಯೆ14ರಷ್ಟಿತ್ತು ಎಂದು ಭದ್ರತಾ ಸಂಸ್ಥೆಗಳು ಸಿದ್ಧಪಡಿಸಿದವರದಿ ಹೇಳಿದೆ.

ಆಗಸ್ಟ್‌5ಮತ್ತು6ರ ನಂತರ ಉಗ್ರರ ಚಟುವಟಿಕೆಯ ಬೆಳವಣಿಗೆಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗಿದ್ದು,ಹತ್ಯೆಯಾದ ಉಗ್ರರ ಅಂತ್ಯಕ್ರಿಯೆಯಲ್ಲಿ ಸುಮಾರು ಹತ್ತು ಸಾವಿರ ಜನರು ಸೇರುತ್ತಿದ್ದರು.ಈಗ ಬೆರಳೆಣಿಕೆಯ ಸಂಬಂಧಿಗಳಷ್ಟೇ ಸೇರುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

ಭದ್ರತಾ ಪಡೆಗಳ ಕೈಗೆ ಸಿಕ್ಕಿ ಬಿದ್ದ ಉಗ್ರರು ತಮ್ಮ ಕುಟುಂಬ ಸದಸ್ಯರಿಗೆ ಕಳುಹಿಸುತ್ತಿದ್ದ ಕೊನೆಯ ಸಂದೇಶಗಳು ಅಥವಾ ಕೊನೆಯ ಬಾರಿಗೆ ಫೋನಿನಲ್ಲಿ ಮಾತನಾಡಿದ ಮಾತುಗಳು ಸ್ಥಳೀಯ ಯುವಕರು ಉಗ್ರ ಸಂಘಟನೆಗೆ ಸೇರುವಂತೆ ಪ್ರಚೋದಿಸುತ್ತಿದ್ದವು. ಆಗಸ್ಟ್‌5ರ ನಂತರ ಇಂಟರ್‌ನೆಟ್‌ ಹಾಗೂ ಮೊಬೈಲ್‌ ಕರೆ ಸೇವೆ ಸ್ಥಗಿತದಿಂದ ಅಂಥ ಉಗ್ರರ ಧ್ವನಿ(ಆಡಿಯೊ)ಸಂದೇಶಗಳ ಪ್ರಸರಣಕ್ಕೆ ಈಗ ಕಡಿವಾಣ ಬಿದ್ದಿದೆ.

ಭದ್ರತಾ ಪಡೆ ಹಾಗೂ ಉಗ್ರರ ನಡುವಿನ ಹೋರಾಟದ ಸಂದರ್ಭಗಳಲ್ಲಿ ನಡೆಯುತ್ತಿದ್ದ ಕಲ್ಲು ತೂರಾಟದಂತಹ ಘಟನೆಗಳು ವರದಿಯಾಗಿಲ್ಲ.ಇದರಿಂದಾಗಿ ಸಹಜವಾಗಿ ಆಶ್ರುವಾಯು,ರಬ್ಬರ್‌ ಗುಂಡು ಬಳಕೆ ಕಡಿಮೆಯಾಗಿದ್ದು,ಈ ವೇಳೆ ಆಗುತ್ತಿದ್ದ ಸಾವು–ನೋವುಗಳ ಸಂಖ್ಯೆಯೂ ಕಡಿಮೆಯಾಗಿದೆ.ಇದಕ್ಕೆ ಅಂತರ್ಜಾಲ ಸ್ಥಗಿತ ಮತ್ತು370ನೇ ವಿಧಿ ರದ್ದು ಮಾಡಿದ ನಂತರದ ಬೆಳವಣಿಗೆ ಕಾರಣವಾಗಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.