ಸಾವು
(ಪ್ರಾತಿನಿಧಿಕ ಚಿತ್ರ)
ಚಂದ್ರಾಪುರ: ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯಲ್ಲಿ ಹುಲಿಯೊಂದು ಮೂವರು ಮಹಿಳೆಯರನ್ನು ಶನಿವಾರ ಬೆಳಿಗ್ಗೆ ಕೊಂದಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಹುಲಿಯು ಏಕಕಾಲದಲ್ಲಿ ಮೂವರನ್ನು ಕೊಂದಿರುವ ಈ ಆಘಾತಕಾರಿ ಘಟನೆಯು ಸಿಂದೆವಾಹಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಮೆಂಧಾ ಮಲ್ ಗ್ರಾಮದ ಮಹಿಳೆಯರು ತೆಂಡು ಎಲೆಗಳನ್ನು ಸಂಗ್ರಹಿಸಲು ಅರಣ್ಯಕ್ಕೆ ತೆರಳಿದ್ದರು. 11.30ರ ವೇಳೆಗೆ ಇವರ ದಾಳಿ ಮಾಡಿದ ಹುಲಿಯು ಎಲ್ಲರನ್ನೂ ಕೊಂದು ಹಾಕಿದೆ. ಕಾಂತಾಬಾಯಿ ಚೌಧರಿ (60), ಇವರ ಸೊಸೆ ಶುಭಾಂಗಿ ಚೌಧರಿ (38) ಹಾಗೂ ಸಾರಿಕಾ ಶಿಂದೆ ಮೃತರು.
ಸಿಂದೆವಾಹಿ ಸರ್ಕಾರಿ ಆಸ್ಪತ್ರೆಯಲ್ಲಿ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ನಡೆದ ಸ್ಥಳದಿಂದ 5 ಕಿ.ಮೀ ದೂರದಲ್ಲಿ 50 ವರ್ಷದ ಮಹಿಳೆಯೊಬ್ಬರ ಮೇಲೆ ಹುಲಿಯೊಂದು ದಾಳಿ ಮಾಡಿರುವ ಪ್ರತ್ಯೇಕ ಘಟನೆ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.