ತಿರುಮಲ ತಿರುಪತಿ ದೇವಸ್ಥಾನ ಮತ್ತು ತಿರುಪತಿ ಲಡ್ಡು
ಹೈದರಾಬಾದ್: ತಿರುಪತಿ ತಿರುಮಲ ದೇವಸ್ಥಾನದ ಪವಿತ್ರ ಪ್ರಸಾದ ಲಡ್ಡು ತಯಾರಿಕೆಗೆ ಕಲಬೆರಕೆ ತುಪ್ಪ ಪೂರೈಸಿರುವ ಆರೋಪ ಎದುರಿಸುತ್ತಿರುವ ತಮಿಳುನಾಡಿನ ಎಆರ್ ಡೇರಿ ಪ್ರೈವೇಟ್ ಲಿಮಿಟೆಡ್, ಉತ್ತರಾಖಂಡದ ಡೇರಿಯಿಂದ ಪ್ರತಿ ಕೆ.ಜಿಗೆ ₹2.75ರಿಂದ ₹3 ಕಮಿಷನ್ ಪಡೆಯುತ್ತಿತ್ತು ಎನ್ನುವುದು ಸಿಬಿಐ ನೇತೃತ್ವದ ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆಯಲ್ಲಿ ಪತ್ತೆಯಾಗಿದೆ.
ತುಪ್ಪ ಕಲಬೆರಕೆಯ ಪ್ರಕರಣ ಬಹಿರಂಗಗೊಂಡ ನಂತರ ಅದರ ಪರಿಣಾಮಗಳಿಂದ ಆತಂಕಗೊಂಡಿದ್ದ ಉತ್ತರಾಖಂಡ ಮೂಲದ ಡೇರಿ ಪ್ರವರ್ತಕರು ಸರ್ಕಾರದ ಕ್ರಮದಿಂದ ತಪ್ಪಿಸಿಕೊಳ್ಳಲು ತಮ್ಮ ವಾಹನಗಳ ಚಾಲಕರನ್ನು ಡೇರಿಯ ನಿರ್ದೇಶಕರನ್ನಾಗಿ ನೇಮಿಸಿಕೊಂಡಿದ್ದರು ಎನ್ನುವ ಅಂಶವನ್ನು ಎಸ್‌ಐಟಿಯು ಇತ್ತೀಚೆಗೆ ತಿರುಪತಿಯ ನ್ಯಾಯಾಲಯಕ್ಕೆ ಸಲ್ಲಿಸಿರುವ ರಿಮ್ಯಾಂಡ್ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಮಹತ್ವದ ಬೆಳವಣಿಗೆಯಲ್ಲಿ, ಎಸ್‌ಐಟಿಯು ಲಡ್ಡು ಪ್ರಸಾದ ಕಲಬೆರಕೆ ಹಗರಣಕ್ಕೆ ಸಂಬಂಧಿಸಿ, ಉತ್ತರಾಖಂಡದ ರೂರ್ಕಿಯ ಭೋಲೆ ಬಾಬಾ ಡೇರಿಯ ಮಾಜಿ ನಿರ್ದೇಶಕರಾದ ವಿಪಿನ್ ಜೈನ್ ಮತ್ತು ಪೊಮಿಲ್ ಜೈನ್, ತಿರುಪತಿಯ ವೈಷ್ಣವಿ ಡೇರಿಯ ಸಿಇಒ ಅಪೂರ್ವ ವಿನಯ್ ಕಾಂತ್ ಚಾವ್ಡಾ ಮತ್ತು ಎಆರ್ ಡೈರಿ ವ್ಯವಸ್ಥಾಪಕ ನಿರ್ದೇಶಕ ರಾಜು ರಾಜಶೇಖರನ್ ಅವರನ್ನು ಬಂಧಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.