ADVERTISEMENT

ದೆಹಲಿ | ಅಗ್ನಿ ಅವಘಢ: ಇಬ್ಬರು ಬಾಲಕರ ಸಾವು, 800 ಗುಡಿಸಲು ಭಸ್ಮ

ಪಿಟಿಐ
Published 27 ಏಪ್ರಿಲ್ 2025, 22:37 IST
Last Updated 27 ಏಪ್ರಿಲ್ 2025, 22:37 IST
<div class="paragraphs"><p>ನವದೆಹಲಿಯ ರೋಹಿಣಿ ಪ್ರದೇಶದ ಸೆಕ್ಟರ್‌ 17ರಲ್ಲಿರುವ ಕೊಳೆಗೇರಿಯೊಂದರಲ್ಲಿ ಭಾನುವಾರ ಅಗ್ನಿ ಅವಘಡ ಸಂಭವಿಸಿದ್ದರಿಂದ ನಿವಾಸಿಗಳನ್ನು ಸುರಕ್ಷಿತ ಜಾಗಕ್ಕೆ ಕರೆತರಲಾಗಿತ್ತು&nbsp; </p></div>

ನವದೆಹಲಿಯ ರೋಹಿಣಿ ಪ್ರದೇಶದ ಸೆಕ್ಟರ್‌ 17ರಲ್ಲಿರುವ ಕೊಳೆಗೇರಿಯೊಂದರಲ್ಲಿ ಭಾನುವಾರ ಅಗ್ನಿ ಅವಘಡ ಸಂಭವಿಸಿದ್ದರಿಂದ ನಿವಾಸಿಗಳನ್ನು ಸುರಕ್ಷಿತ ಜಾಗಕ್ಕೆ ಕರೆತರಲಾಗಿತ್ತು 

   

ಪಿಟಿಐ

ನವದೆಹಲಿ: ದೆಹಲಿಯ ರೋಹಿಣಿ ಪ್ರದೇಶದ ಸೆಕ್ಟರ್‌ 17ರಲ್ಲಿನ ಕೊಳೆಗೇರಿಯೊಂದರಲ್ಲಿ ಭಾನುವಾರ ಸಂಭವಿಸಿದ ಅಗ್ನಿ ಅವಘಡದಲ್ಲಿ ಇಬ್ಬರು ಮಕ್ಕಳು ಮೃತಪಟ್ಟಿದ್ದು, 800ಕ್ಕೂ ಅಧಿಕ ಗುಡಿಸಲುಗಳು ಭಸ್ಮವಾಗಿವೆ.

ADVERTISEMENT

ಮೂರು ಗಂಟೆಗೂ ಹೆಚ್ಚು ಕಾರ್ಯಾಚರಣೆ ನಡೆಸಿದ ಅಗ್ನಿ ಶಾಮಕ ದಳ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ.

‘ಭಸ್ಮವಾಗಿದ್ದ ಗುಡಿಸಲುಗಳ ಅವಶೇಷಗಳಿಂದ, ಎರಡೂವರೆ ವರ್ಷ ಹಾಗೂ ಮೂರು ವರ್ಷದ ಬಾಲಕರ ಮೃತದೇಹಗಳನ್ನು ಹೊರತೆಗೆಯಲಾಗಿದೆ’ ಎಂದು ಡಿಸಿಪಿ (ರೋಹಿಣಿ) ಅಮಿತ್‌ ಗೋಯೆಲ್ ತಿಳಿಸಿದ್ದಾರೆ.

‘ಬೆಳಿಗ್ಗೆ 11.55ರ ವೇಳೆಗೆ ಅಗ್ನಿ ಅವಘಡ ಕುರಿತು ಕರೆ ಸ್ವೀಕರಿಸಿದ ಕೂಡಲೇ, ಘಟನಾ ಸ್ಥಳಕ್ಕೆ 17 ಅಗ್ನಿಶಾಮಕ ವಾಹನಗಳನ್ನು ಕಳಿಸಿಕೊಡಲಾಯಿತು. ನಂತರ, ಒಟ್ಟು 26 ವಾಹನಗಳನ್ನು ಅಗ್ನಿ ನಂದಿಸುವ ಕಾರ್ಯಕ್ಕೆ ನಿಯೋಜನೆ ಮಾಡಲಾಯಿತು’ ಎಂದು ದೆಹಲಿ ಅಗ್ನಿ ಸೇವೆಗಳ ಅಧಿಕಾರಿ ಹೇಳಿದ್ದಾರೆ.

‘ಒಂದು ಗುಡಿಸಲಿನಲ್ಲಿ ಕಾಣಿಸಿಕೊಂಡ ಬೆಂಕಿ, ನಂತರ ಇತರೆಡೆ ವ್ಯಾಪಿಸಿತು. ಇಕ್ಕಟ್ಟಾದ ರಸ್ತೆಗಳ ಕಾರಣ, ಬೆಂಕಿ ನಂದಿಸುವುದು ಸವಾಲಿನದಾಗಿತ್ತು’ ಎಂದೂ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.