ADVERTISEMENT

ಶಸ್ತ್ರಾಸ್ರಗಳೊಂದಿಗೆ ಇಬ್ಬರು ಭದ್ರತಾ ಪಡೆ ಸಿಬ್ಬಂದಿ ನಾಪತ್ತೆ

ಪಿಟಿಐ
Published 14 ಅಕ್ಟೋಬರ್ 2020, 11:40 IST
Last Updated 14 ಅಕ್ಟೋಬರ್ 2020, 11:40 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶ್ರೀನಗರ:ಎಸ್‌ಎಸ್‌ಬಿ ಯೋಧ ಸೇರಿದಂತೆ ಇಬ್ಬರು ಭದ್ರತಾ ಪಡೆಯ ಸಿಬ್ಬಂದಿ ಜಮ್ಮು ಮತ್ತು ಕಾಶ್ಮೀರದ ಬುಡ್ಗಂ ಜಿಲ್ಲೆಯ ಚಾಡೂರಾ ಹಾಗೂ ನಗಮ್‌ ಪ್ರದೇಶದ ಶಿಬಿರದಿಂದ ಕೆಲವು ಶಸ್ತ್ರಾಸ್ತ್ರಗಳು ಮತ್ತು ಮದ್ದು ಗುಂಡುಗಳೊಂದಿಗೆ ನಾಪತ್ತೆಯಾಗಿದ್ದಾರೆ.

ನಾಪತ್ತೆಯಾಗಿರುವವರಲ್ಲಿ ಚಾಡೂರಾದಲ್ಲಿ ನಡೆಯುತ್ತಿರುವ ವಿಶೇಷ ಕಾರ್ಯಾಚರಣೆ ಶಿಬಿರದ ವಿಶೇಷ ಪೊಲೀಸ್ ಅಧಿಕಾರಿ ಅಲ್ತಾಫ್ ಹುಸೇನ್ ಕೂಡ ಒಬ್ಬರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಾಪತ್ತೆಯಾದ ಈ ಅಧಿಕಾರಿಯ ಜೊತೆಗೆ, ಎಕೆ ರೈಫಲ್ಸ್‌ ಮತ್ತು ಮೂರು ಮ್ಯಾಗಜಿನ್ಸ್‌ ಕೂಡ ಶಿಬಿರದಿಂದ ನಾಪತ್ತೆಯಾಗಿವೆ. ಘಟನೆಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಮತ್ತೊಂದು ಘಟನೆಯಲ್ಲಿ ನಗಮ್‌ ಶಿಬಿರದಿಂದ ಎಸ್‌ಎಸ್‌ಬಿ ಕಾನ್‌ಸ್ಟೇಬಲ್‌ ಒಬ್ಬರು ನಾಪತ್ತೆಯಾಗಿದ್ದು, ಅವರ ಹೆಸರು ಕೂಡ ಅಲ್ತಾಫ್ ಹುಸ್ಸೇನ್‌. ಅವರೊಂದಿಗೆ ಐಎನ್‌ಎಸ್‌ಎಸ್‌ ರೈಫಲ್‌ನ ಒಂದು ಮ್ಯಾಗಜಿನ್‌ ನಾಪತ್ತೆಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.