ADVERTISEMENT

ವಿದೇಶಿ ಪದವಿಗೆ ಮಾನ್ಯತೆ: ಯುಜಿಸಿಯಿಂದ ಹೊಸ ನಿಯಮ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2025, 16:26 IST
Last Updated 5 ಏಪ್ರಿಲ್ 2025, 16:26 IST
–
   

ನವದೆಹಲಿ: ವಿದೇಶದ ಉನ್ನತ ಶಿಕ್ಷಣ ಸಂಸ್ಥೆಗಳಿಂದ ಪಡೆದ ವಿದ್ಯಾರ್ಹತೆಗಳಿಗೆ ಮಾನ್ಯತೆ ನೀಡುವುದಕ್ಕೆ ಸಂಬಂಧಿಸಿದ ಹೊಸ ನಿಯಮಗಳನ್ನು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಶನಿವಾರ ಘೋಷಿಸಿದೆ.

ವಿದೇಶದಲ್ಲಿನ ಶೈಕ್ಷಣಿಕ ಸಂಸ್ಥೆಗಳಿಂದ ಪಡೆದ ವಿದ್ಯಾರ್ಹತೆಗೆ ಸಮಾನ ಪದವಿ ನೀಡುವುದಕ್ಕೆ ಕೂಡ ಈ ನಿಯಮಗಳಲ್ಲಿ ಅವಕಾಶ ಇದೆ ಎಂದು ಮೂಲಗಳು ಹೇಳಿವೆ.

ಅಂತರರಾಷ್ಟ್ರೀಯ ಪದವಿ ಪಡೆದು ದೇಶಕ್ಕೆ ಮರಳುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವ ಕಾರಣ ಯುಜಿಸಿ ಈ ನಿಯಮಗಳನ್ನು ರೂಪಿಸಿದೆ. ಇಂತಹ ವಿದ್ಯಾರ್ಥಿಗಳು ದೇಶದ ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು ಅಥವಾ ಉದ್ಯೋಗ ಗಿಟ್ಟಿಸಲು ಎದುರಿಸುತ್ತಿದ್ದ ಸಮಸ್ಯೆಗೂ ಈ ನಿರ್ಧಾರ ಪರಿಹಾರ ಒದಗಿಸಲಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.