ADVERTISEMENT

ಪಿಎಂ ಮೋದಿ ಪ್ರತಿನಿಧಿಸುವ ವಾರಾಣಸಿಯ ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿಗೆ ಹಿನ್ನಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಮಾರ್ಚ್ 2022, 6:48 IST
Last Updated 10 ಮಾರ್ಚ್ 2022, 6:48 IST
ಪ್ರಧಾನಮಂತ್ರಿ ನರೇಂದ್ರ ಮೋದಿ
ಪ್ರಧಾನಮಂತ್ರಿ ನರೇಂದ್ರ ಮೋದಿ   

ಲಖನೌ:ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಲೋಕಸಭೆಯಲ್ಲಿ ಪ್ರತಿನಿಧಿಸುವ ವಾರಾಣಸಿ ಜಿಲ್ಲೆಯ, ವಾರಾಣಸಿ ಕಂಟೋನ್ಮೆಂಟ್ ಮತ್ತು ವಾರಾಣಸಿ ಉತ್ತರ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಆದರೆ, ವಾರಾಣಸಿ ದಕ್ಷಿಣ ವಿಧಾನಸಭೆಯಲ್ಲಿ ಹಿನ್ನಡೆ ಅನುಭವಿಸಿದೆ.

ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ನೀಲಕಂಠ ತಿವಾರಿ ಅವರು2017ರ ಚುನಾವಣೆಯಲ್ಲಿ ಗೆದ್ದು ಯೋಗಿ ಸಂಪುಟದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದರು. ಆದರೆ, ಈ ಬಾರಿ ಸಮಾಜವಾದಿ ಪಕ್ಷದ (ಎಸ್‌ಪಿ) ಅಭ್ಯರ್ಥಿ ಕಿಶನ್ ದೀಕ್ಷಿತ್ ಎದುರು 6,146 ಮತಗಳಿಂದ ಹಿನ್ನಡೆ ಅನುಭವಿಸಿದ್ದಾರೆ.

ತಿವಾರಿ ವಿರುದ್ಧ ಆಡಳಿತ ವಿರೋಧಿ ಅಲೆ ಇದ್ದ ಹೊರತಾಗಿಯೂ, ಅವರ ಗೆಲುವಿಗಾಗಿ ಆರ್‌ಎಸ್‌ಎಸ್‌ ಭಾರಿ ಪ್ರಯತ್ನ ನಡೆಸಿತ್ತು ಎಂದು ಮೂಲಗಳು ತಿಳಿಸಿವೆ.

ADVERTISEMENT

ವಾರಾಣಸಿ ದಕ್ಷಿಣ ಕ್ಷೇತ್ರ ವ್ಯಾಪ್ತಿಯಲ್ಲಿ ಇತ್ತೀಚೆಗೆ ಕಾಶಿ ವಿಶ್ವನಾಥ ಧಾಮ ಕಾರಿಡಾರ್‌ ಉದ್ಘಾಟಿಸಲಾಗಿತ್ತು ಎಂಬುದು ವಿಶೇಷ.

ವಾರಾಣಸಿ ಕಂಟೋನ್ಮೆಂಟ್‌ನಲ್ಲಿ ಬಿಜೆಪಿಯ ಸೌರಭ್‌ ಶ್ರೀವಸ್ತವ 2,770 ಮತಗಳಿಂದ ಹಾಗೂ ವಾರಾಣಸಿ ಉತ್ತರ ಕ್ಷೇತ್ರದಲ್ಲಿ ರವೀಂದ್ರ ಜೈಸ್ವಾಲ್‌ 10,153 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.