ADVERTISEMENT

ಸರ್ಕಾರ ವಿಫಲವಾದಾಗ ಪ್ರತಿಪಕ್ಷಗಳು ಇ.ಡಿ ಪರೀಕ್ಷೆ ಎದುರಿಸಬೇಕಾಗುತ್ತದೆ: ಅಖಿಲೇಶ್‌

ಪಿಟಿಐ
Published 15 ಜೂನ್ 2022, 11:21 IST
Last Updated 15 ಜೂನ್ 2022, 11:21 IST
ಅಖೀಲೇಶ್‌ ಯಾದವ್‌
ಅಖೀಲೇಶ್‌ ಯಾದವ್‌   

ಲಖನೌ: ‘ಜಾರಿ ನಿರ್ದೇಶನಾಲಯ (ಇ.ಡಿ) ಎಂಬುದು ಈಗ ‘ಪ‍್ರಜಾಪ್ರಭುತ್ವದಲ್ಲಿನ ಪರೀಕ್ಷೆ’ (ಎಕ್ಸಾಮಿನೇಷನ್‌ ಇನ್‌ ಡೆಮಾಕ್ರಸಿ) ಆಗಿದೆ. ಆಡಳಿತರೂಢ ಸರ್ಕಾರ ವಿಫಲವಾದಾಗ ಪ್ರತಿಪಕ್ಷಗಳು ಈ ಪರೀಕ್ಷೆಯನ್ನು ಬರೆಯಬೇಕಾಗುತ್ತದೆ’ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಅವರು ಹೇಳಿದ್ದಾರೆ.

ರಾಹುಲ್‌ ಗಾಂಧಿ ಅವರನ್ನು ಇ.ಡಿ ಅಧಿಕಾರಿಗಳು ವಿಚಾರಿಸುತ್ತಿರುವ ಘಟನೆಗೆ ಸಂಬಂಧಿಸಿದಂತೆ ಅಖಿಲೇಶ್‌ ಟ್ವೀಟ್‌ ಮಾಡಿದ್ದಾರೆ. ಟ್ವೀಟ್‌ನಲ್ಲಿ, ‘ಇ.ಡಿ ಎಂದರೆ ಪ್ರಜಾಪ್ರಭುತ್ವದಲ್ಲಿನ ಪರೀಕ್ಷೆ. ಯಾವಾಗ ಸರ್ಕಾರವು ಆಡಳಿತದಲ್ಲಿ ವಿಫಲವಾಗುತ್ತದೆಯೋ, ಆಗೆಲ್ಲ ಈ ಪರೀಕ್ಷೆಯನ್ನು ಘೋಷಿಸುತ್ತದೆ. ಪರೀಕ್ಷೆಗೆ ಸರಿಯಾಗಿ ತಯಾರಿ ನಡೆಸಿದವರು ಓದು, ಬರಹ ಅಥವಾ ಮೌಖಿಕ ಪರೀಕ್ಷೆಗೆ ಹೆದರುವುದಿಲ್ಲ. ನೀವು ಯಾವತ್ತೂ ಹೆದರಬೇಡಿ’ ಎಂದು ರಾಹುಲ್‌ ಅವರಿಗೆ ಅಖಿಲೇಶ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT