ADVERTISEMENT

ತೇಜಸ್ವಿ ಯಾದವ್ ಹೇಳಿಕೆ ಹಿಂಪಡೆದ ಬಳಿಕವೂ ವಿಚಾರಣೆ ಏಕೆ? ಸುಪ್ರಿಂ ಕೋರ್ಟ್

ಪಿಟಿಐ
Published 22 ಜನವರಿ 2024, 14:21 IST
Last Updated 22 ಜನವರಿ 2024, 14:21 IST
ತೇಜಸ್ವಿ ಯಾದವ್
ತೇಜಸ್ವಿ ಯಾದವ್   

ನವದೆಹಲಿ: ತಮ್ಮ ವಿರುದ್ಧ ಗುಜರಾತ್‌ನ ಅಹಮದಾಬಾದ್‌ ನ್ಯಾಯಾಲಯದಲ್ಲಿ ದಾಖಲಾಗಿರುವ ಮಾನನಷ್ಟ ಮೊಕದ್ದಮೆಯ ವಿಚಾರಣೆಯನ್ನು ಬೇರೆಡೆಗೆ ವರ್ಗಾಯಿಸುವಂತೆ ಕೋರಿ ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್‌ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್‌ ಜನವರಿ 29ಕ್ಕೆ ಮುಂದೂಡಿತು.

‘ಸದ್ಯದ ಸನ್ನಿವೇಶದಲ್ಲಿ ಗುಜರಾತಿಗಳು ಮಾತ್ರ ಘಾತುಕರು’ ಎಂದು ತೇಜಸ್ವಿ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಸಂಬಂಧಿಸಿದ ಮೊಕದ್ದಮೆ ಇದಾಗಿದೆ.

ತೇಜಸ್ವಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಸ್‌. ಓಕಾ ಮತ್ತು ಉಜ್ಜಲ್ ಭುಯಿಯಾಂ ಅವರಿದ್ದ ಪೀಠವು, ತೇಜಸ್ವಿ ಅವರು ತಮ್ಮ ಹೇಳಿಕೆಯನ್ನು ಹಿಂಪ‍ಡೆದ ಬಳಿಕವೂ ಏಕೆ ವಿಚಾರಣೆಯನ್ನು ಮುಂದುವರಿಸಲಾಗುತ್ತದೆ ಎಂದು ಅಹಮದಾಬಾದ್ ನ್ಯಾಯಾಲಯವನ್ನು ಪ್ರಶ್ನಿಸಿತು. 

ADVERTISEMENT

ಪ್ರತಿವಾದಿಗಳು ತೇಜಸ್ವಿ ಅವರು ಹೇಳಿಕೆ ಹಿಂಪಡೆದಿರುವ ಕುರಿತು ಸೂಕ್ತ ಪರಿಶೀಲನೆ ನಡೆಸುವ ಸಲುವಾಗಿ ಸಮಯಾವಕಾಶ ಕೇಳಿರುವ ಕಾರಣ ವಿಚಾರಣೆಯನ್ನು ಮುಂದಿನ ಸೋಮವಾರಕ್ಕೆ ಪಟ್ಟಿಮಾಡಲಾಗಿದೆ ಎಂದು ಕೋರ್ಟ್‌ ಹೇಳಿತು.

ತೇಜಸ್ವಿ ಅವರು 2023ರ ಮಾರ್ಚ್‌ನಲ್ಲಿ ಬಿಹಾರದ ಪಟ್ನಾದಲ್ಲಿ ಮಾಧ್ಯಮಗಳ ಎದುರು ಈ ಹೇಳಿಕೆ ನೀಡಿದ್ದರು. ಈ ಹೇಳಿಕೆಯು ಎಲ್ಲಾ ಗುಜರಾತಿಗಳಿಗೆ ಮಾಡಿದ ಅವಮಾನ ಎಂದು ಗುಜರಾತ್‌ನ ಸಾಮಾಜಿಕ ಕಾರ್ಯಕರ್ತರೊಬ್ಬರು ತೇಜಸ್ವಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಆ ಬಳಿಕ ತೇಜಸ್ವಿ ಅವರು ತಮ್ಮ ಹೇಳಿಕೆಯನ್ನು ಹಿಂಪಡೆದಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.