ADVERTISEMENT

ಹೆಣ್ಣು ಹೆತ್ತಿದ್ದಕ್ಕೆ ಫೋನ್‌ನಲ್ಲೇ ತಲಾಖ್ ಕೊಟ್ಟ ಗಂಡ: ದೂರು ಕೊಟ್ಟ ಮಹಿಳೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2019, 1:37 IST
Last Updated 20 ಅಕ್ಟೋಬರ್ 2019, 1:37 IST
   

ಸಂಬಾಲ್ (ಉತ್ತರ ಪ್ರದೇಶ): ಹೆಣ್ಣುಮಗು ಹೆತ್ತಿದ್ದಕ್ಕೆ ನನ್ನ ಗಂಡ ತ್ರಿವಳಿ ತಲಾಖ್ ಹೇಳಿ ಸಾಂಸರಿಕ ಬಂಧ ಕಳೆದುಕೊಂಡ ಆರೋಪಿಸಿ ಮಹಿಳೆಯೊಬ್ಬರು ಉತ್ತರ ಪ್ರದೇಶದಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ.

ಇದೀಗ ತನ್ನ ತವರು ಮನೆಯಲ್ಲಿರುವ ಮಹಿಳೆ ಗಂಡನ ಮನೆಯವರ ಜೊತೆಗೆ ಹಲವು ಬಹುಕಾಲದಿಂದ ವ್ಯಾಜ್ಯವಿತ್ತು ಎಂದು ದೂರಿನಲ್ಲಿ ಹೇಳಿದ್ದಾರೆ.

ಕಾಮಿಲ್‌ ಜೊತೆಗೆ 11 ವರ್ಷಗಳ ಹಿಂದೆ ಮದುವೆಯಾಗಿತ್ತು. ಅಕ್ಟೋಬರ್‌ 11ರಂದು ಹೆಣ್ಣುಮಗುವಿಗೆ ಜನ್ಮ ನೀಡಿದೆ. ವಿಷಯ ತಿಳಿದ ನನ್ನ ಪತಿ, ಫೋನ್‌ ಮಾಡಿ ತ್ರಿವಳಿ ತಲಾಖ್ ನೀಡಿದ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಈ ಕುರಿತು ಪ್ರಕರಣ ದಾಖಲಾಗಿದೆ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

‘ತ್ರಿವಳಿ ತಲಾಖ್ ನೀಡಿರುವ ಸಂಬಂಧ ಮಹಿಳೆಯೊಬ್ಬರು ದೂರು ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಸಿ 147, 452, 323, 504 ಸೆಕ್ಷನ್‌ಗಳು ಮತ್ತು ಮುಸ್ಲಿಂ ಮಹಿಳೆಯರ (ಮದುವೆ ಹಕ್ಕು ರಕ್ಷಣ)ಕಾಯ್ದೆ 2019ರ ಪ್ರಕಾರ ಪ್ರಕರಣದ ದಾಖಲಿಸಲಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಮುನಾ ಪ್ರಸಾದ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.