ADVERTISEMENT

ಆನ್‌ಲೈನ್‌ ಮೂಲಕವೇ ಮರುಮೌಲ್ಯಮಾಪನಕ್ಕೆ ಅರ್ಜಿ; ಜೂನ್‌ 21ರಿಂದ ಪೂರಕ ಪರೀಕ್ಷೆ

ಅರ್ಜಿ ಸಲ್ಲಿಕೆಗೆ ಮೇ 18 ಕೊನೇದಿನ

​ಪ್ರಜಾವಾಣಿ ವಾರ್ತೆ
Published 7 ಮೇ 2018, 9:02 IST
Last Updated 7 ಮೇ 2018, 9:02 IST
ಆನ್‌ಲೈನ್‌ ಮೂಲಕವೇ ಮರುಮೌಲ್ಯಮಾಪನಕ್ಕೆ ಅರ್ಜಿ; ಜೂನ್‌ 21ರಿಂದ ಪೂರಕ ಪರೀಕ್ಷೆ
ಆನ್‌ಲೈನ್‌ ಮೂಲಕವೇ ಮರುಮೌಲ್ಯಮಾಪನಕ್ಕೆ ಅರ್ಜಿ; ಜೂನ್‌ 21ರಿಂದ ಪೂರಕ ಪರೀಕ್ಷೆ   

ಬೆಂಗಳೂರು: ಉತ್ತರ ಪತ್ರಿಕೆಗಳ ಛಾಯಪ್ರತಿಗಳು ಹಾಗೂ ಮರುಮೌಲ್ಯಮಾಪನಕ್ಕೆ ಇದೇ ಮೊದಲ ಬಾರಿಗೆ ಆನ್‌ಲೈನ್‌ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಉತ್ತರ ಪತ್ರಿಕೆಗಳ ಸ್ಕ್ಯಾನ್‌ ಪ್ರತಿ ಪಡೆಯಲು ಮೇ 9ರಿಂದ ಅರ್ಜಿ ಸಲ್ಲಿಕೆ ಪ್ರಾರಂಭವಾಗಲಿದ್ದು, ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ವೆಬ್‌ಸೈಟ್‌ http://kseeb.kar.nic.in/ ಮೂಲಕ ಆನ್‌ಲೈನ್‌ ಅರ್ಜಿ ಸಲ್ಲಿಸಬಹುದಾಗಿದೆ. ಮೇ 11ರಿಂದ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಬಹುದು.
ಮರುಎಣಿಕೆ ಬಯಸುವ ವಿದ್ಯಾರ್ಥಿಗಳು ಸಂಬಂಧಪಟ್ಟ ವಿಷಯದ ಉತ್ತರ ಪತ್ರಿಕೆಯ ಸ್ಕ್ಯಾನ್‌ ಪ್ರತಿಯನ್ನು ಪಡೆಯುವುದು ಕಡ್ಡಾಯವಾಗಿದೆ. ಮೇ.8ರಂದು ಶಾಲೆಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಳ್ಳಲಿದೆ.

ಜೂನ್‌ 21ರಿಂದ ಪೂರಕ ಪರೀಕ್ಷೆ

ADVERTISEMENT

ಜೂನ್‌ 21ರಿಂದ 28ರ ವರೆಗೂ ಪೂರಕ ಪರೀಕ್ಷೆ ನಿಗದಿಯಾಗಿದೆ. ಮೇ 8ರಿಂದ ಆನ್‌ಲೈನ್‌ ಮೂಲಕವೇ ಪೂರಕ ಪರೀಕ್ಷೆಗೂ ಅರ್ಜಿ ಸಲ್ಲಿಸಬೇಕಿದೆ. ಮೇ 19 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಅನುತ್ತೀರ್ಣಗೊಂಡಿರುವ ವಿದ್ಯಾರ್ಥಿಗಳು ಮರುಮೌಲ್ಯಮಾಪನದ ಫಲಿತಾಂಶ ಬರುವವರೆಗೂ ಕಾಯುವ ಹಾಗಿಲ್ಲ.

ಶುಲ್ಕ ವಿವರ:

ಒಂದು ವಿಷಯದ ಸ್ಕ್ಯಾನ್‌ ಪ್ರತಿ– ₹305
ಒಂದು ವಿಷಯದ ಮರುಮೌಲ್ಯಮಾಪನ– ₹705

ಅರ್ಜಿ ಸಲ್ಲಿಕೆ ಕೊನೇ ದಿನ:

ಸ್ಕ್ಯಾನ್‌ ಪ್ರತಿ- ಮೇ 18
ಮರುಮೌಲ್ಯಮಾಪನ– ಮೇ 21
ಪೂರಕ ಪರೀಕ್ಷೆ– ಮೇ 19

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.