ADVERTISEMENT

ಆರ್‌.ಆರ್‌.ನಗರ ಮತ ಎಣಿಕೆ: ಮುನ್ನಡೆ ಕಾಯ್ಡುಕೊಂಡಿರುವ ಕಾಂಗ್ರೆಸ್‌ನ ಮುನಿರತ್ನ

ಹುಚ್ಚ ವೆಂಕಟ್‌ಗೆ 192 ಮತ; ನೋಟಾದಲ್ಲಿ 779

​ಪ್ರಜಾವಾಣಿ ವಾರ್ತೆ
Published 31 ಮೇ 2018, 4:31 IST
Last Updated 31 ಮೇ 2018, 4:31 IST
ಆರ್‌.ಆರ್‌.ನಗರ ಮತ ಎಣಿಕೆ: ಮುನ್ನಡೆ ಕಾಯ್ಡುಕೊಂಡಿರುವ ಕಾಂಗ್ರೆಸ್‌ನ ಮುನಿರತ್ನ
ಆರ್‌.ಆರ್‌.ನಗರ ಮತ ಎಣಿಕೆ: ಮುನ್ನಡೆ ಕಾಯ್ಡುಕೊಂಡಿರುವ ಕಾಂಗ್ರೆಸ್‌ನ ಮುನಿರತ್ನ   

ಬೆಂಗಳೂರು: ರಾಜರಾಜೇಶ್ವರಿ ನಗರ(ಆರ್‌.ಆರ್‌.ನಗರ) ಕ್ಷೇತ್ರದ ನಾಲ್ಕು ಸುತ್ತುಗಳ ಮತ ಎಣಿಕೆ ಪೂರ್ಣಗೊಂಡಿದ್ದು, ಕಾಂಗ್ರೆಸ್‌ನ ಮುನಿರತ್ನ ಮುನ್ನಡೆ ಕಾಯ್ಡುಕೊಂಡಿದ್ದಾರೆ.

ಮೊದಲ ಸುತ್ತಿನಿಂದಲೂ ಮುನ್ನಡೆ ಸಾಧಿಸಿರುವ ಮುನಿರತ್ನ, ಐದನೇ ಸುತ್ತಿನ ಬಳಿಕ ಸಮೀಪದ ಬಿಜೆಪಿ ಅಭ್ಯರ್ಥಿಗಿಂತ 23,677 ಮತಗಳ ಅಂತರ ಹೊಂದಿದ್ದಾರೆ.

ಚುನಾವಣಾ ಅಕ್ರಮ ನಡೆದಿರುವ ಕಾರಣಕ್ಕೆ ಮೇ 15ರಂದು ನಡೆಯಬೇಕಿದ್ದ ಮತದಾನವನ್ನು ಮುಂದೂಡಲಾಗಿತ್ತು. ಇದೇ 28ರಂದು ನಿಗದಿಯಾಗಿದ್ದ ಚುನಾವಣೆಯಲ್ಲಿ ಶೇ 54.20 ರಷ್ಟು ಮತದಾನ ನಡೆದಿತ್ತು.

ADVERTISEMENT

ಕಾಂಗ್ರೆಸ್‌– ಮುನಿರತ್ನ- 41,625
ಬಿಜೆಪಿ– ತುಳಸಿ ಮುನಿರಾಜುಗೌಡ - 17,948
ಜೆಡಿಎಸ್‌– ಜಿ.ಎಚ್. ರಾಮಚಂದ್ರ- 8,470
ಪಕ್ಷೇತರ– ಹುಚ್ಚ ವೆಂಕಟ್- 192
ನೋಟಾ– 779

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.