ADVERTISEMENT

ಏಳು ಗಣ್ಯರಿಗೆ ಕುವೆಂಪು ವಿವಿ ಗೌರವ ಡಾಕ್ಟರೇಟ್

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2012, 19:30 IST
Last Updated 2 ಫೆಬ್ರುವರಿ 2012, 19:30 IST

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯ ತನ್ನ 22ನೇ ಘಟಿಕೋತ್ಸವದಲ್ಲಿ ವಿವಿಧ ಕ್ಷೇತ್ರದ ಏಳು ಗಣ್ಯರಿಗೆ ಗೌರವ ಡಾಕ್ಟರೇಟ್ ನೀಡಲು ನಿರ್ಧರಿಸಿದೆ.

ರಂಗಭೂಮಿ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿರುವ ಚಿತ್ರದುರ್ಗದ ಸಾಣೇಹಳ್ಳಿಯ  ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಕೃಷಿಯಲ್ಲಿ ವಿಶಿಷ್ಟ ಹೆಜ್ಜೆ ತುಳಿದು ಯಶಸ್ವಿಯಾದ ದೇವಂಗಿ ಪ್ರಫುಲ್ಲಚಂದ್ರ, ರಾಜಕಾರಣದ ಜತೆ ಜತೆಗೆ ಸಹಕಾರ ಕ್ಷೇತ್ರದಲ್ಲೂ ಗಮನಾರ್ಹವಾಗಿ ಗುರುತಿಸಿಕೊಂಡ ಆರ್.ಎಂ. ಮಂಜುನಾಥಗೌಡ, ಇತಿಹಾಸ ಸಂಶೋಧಕ ಕೂಡಲಿ ಜಗನ್ನಾಥಶಾಸ್ತ್ರಿ, ಬೆಂಗಳೂರಿನ ವಿವೇಕಾನಂದ ಯೋಗಕೇಂದ್ರ ಸಾಧಕಿ ಡಾ.ರಘುರಾಂ ನಾಗರತ್ನಾ, ಆಯುರ್ವೇದದಲ್ಲಿ ವಿಶೇಷ ಸಾಧನೆ ಮಾಡಿ `ಪದ್ಮಶ್ರೀ~ಗೂ ಪಾತ್ರರಾದ ಕೃಷ್ಣಕುಮಾರ್ ಹಾಗೂ ಚಿಕ್ಕಮಗಳೂರಿನ ಮೌಂಟೆನ್ ವ್ಯೆ ಕಾಲೇಜಿನ ಶಿಕ್ಷಣ ತಜ್ಞೆ ಆಜ್ರಾ ಅವರಿಗೆ ಗೌರವ ಡಾಕ್ಟರೇಟ್‌ನ್ನು ಫೆಬ್ರುವರಿ 8ರಂದು ನಡೆಯಲಿರುವ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಪ್ರದಾನ ಮಾಡಲಾಗುವುದು.

ಇಸ್ರೋ ಮಾಜಿ ಮುಖ್ಯಸ್ಥ ಜಿ. ಮಾಧವನ್ ನಾಯರ್ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.