ಕನಕಗಿರಿ(ಕೊಪ್ಪಳ ಜಿಲ್ಲೆ): ದಕ್ಷಿಣ ಭಾರತದ ಎತ್ತರದ ತೇರು ಎಂಬ ಖ್ಯಾತಿ ಗಳಿಸಿದ ಸ್ಥಳೀಯ ಕನಕಾಚಲಪತಿ ಮಹಾರಥೋತ್ಸವ ಭಾನುವಾರ ಸಂಜೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
1905ರಲ್ಲಿ ಈ ತೇರಿನ ಗಡ್ಡೆಯನ್ನು ನಿರ್ಮಿಸಲಾಗಿದ್ದು, 72 ಅಡಿ ಎತĶರ, ಗಾಲಿಗಳ ಅಗಲ ಮತ್ತು ಎತĶರ 12 ಅಡಿ ಇದೆ. ಜಾತ್ರೆ ಸಮಯದಲ್ಲಿ ಐದು ಪŁಕಾರದ ಚಟıಗಳನ್ನು ಕಟ್ಟಿ ತಳಿರು, ತೋರಣಗಳಿಂದ ಸಿಂಗರಿಸಲಾಗುತ್ತದೆ.
ಬೆಳಿಗ್ಗೆ ಕನಕಾಚಲಪತಿ ದೇವಸ್ಥಾನದಲ್ಲಿ ಪಂಚಾಮೃತ ಅಭಿಷೇಕ, ತುಳಸಿ ಅರ್ಚನೆ, ರಥದ ಮುಂಭಾಗದಲ್ಲಿ ರಥಾಂಗ ಹೋಮ, ಹವನ, ಪೂರ್ಣಾವತಿ, ಅನ್ನ ಬಲಿ ಇತರೆ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ದಾ, ಭಕ್ತಿಯಿಂದ ನಡೆದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.