ADVERTISEMENT

ಕರಾವಳಿಯಲ್ಲಿ ಮುಂಗಾರು ಚುರುಕು

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2013, 19:59 IST
Last Updated 21 ಸೆಪ್ಟೆಂಬರ್ 2013, 19:59 IST

ಬೆಂಗಳೂರು: ಶನಿವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ರಾಜ್ಯದ ಕರಾವಳಿಯಲ್ಲಿ ನೈರುತ್ಯ ಮುಂಗಾರು ಚುರುಕುಗೊಂಡಿದೆ. ದಕ್ಷಿಣ ಒಳನಾಡಿನ ಹಲವು ಪ್ರದೇಶಗಳು ಮತ್ತು ಉತ್ತರ ಒಳನಾಡಿನ ಕೆಲವೆಡೆ ಮಳೆಯಾಗಿದೆ.

ಗೋಕರ್ಣದಲ್ಲಿ 14 ಸೆಂ.ಮೀ. ಮಳೆಯಾಗಿದೆ. ಸುಬ್ರಹ್ಮಣ್ಯ 9, ಪಣಂ ಬೂರು, ಉಡುಪಿ 8, ಮಂಗಳೂರು, ಮೂಡುಬಿದರೆ, ಬಂಟ್ವಾಳ, ಮಾಣಿ, ಕಾರವಾರ 7, ಮಂಗಳೂರು ವಿಮಾನ ನಿಲ್ದಾಣ, ಕಾರ್ಕಳ, ಶಿರಸಿ 6, ಉಪ್ಪಿ ನಂಗಡಿ, ಸಿದ್ದಾಪುರ,  ಭಟ್ಕಳ, ಕುಮ ಟಾ, ಮಾದಾಪುರ 5,

ಮೂಲ್ಕಿ, ಬೆಳ್ತಂ ಗಡಿ, ಧರ್ಮಸ್ಥಳ, ಪುತ್ತೂರು, ಸುಳ್ಯ, ಕೊಲ್ಲೂರು, ಗೇರುಸೊಪ್ಪ, ಅಂಕೋಲಾ,  ಭಾಗಮಂಡಲ, ಸೋಮವಾರಪೇಟೆ, ಮಡಿಕೇರಿ, ಲಿಂಗನಮಕ್ಕಿ, ಆಗುಂಬೆ 4, ಕೋಟ, ಹೊನ್ನಾವರ, ಕದ್ರಾ, ಸಿದ್ದಾ ಪುರ (ಉ.ಕ), ಮಂಚಿಕೇರಿ, ಕಮಲಾ ಪುರ, ಕೆಂಭಾವಿ, ಮೂರ್ನಾಡು, ತಾಳಗುಪ್ಪ, ಕಮ್ಮರಡಿ 3, ಶೃಂಗೇರಿ, ಕೊಟ್ಟಿಗೆಹಾರ, ಜಯಪುರ, ಕೊಪ್ಪದಲ್ಲಿ ತಲಾ 2 ಸೆಂ.ಮೀ. ಮಳೆಯಾಗಿದೆ.

ಮುನ್ಸೂಚನೆ: ಮುಂದಿನ 48 ಗಂಟೆ ಗಳಲ್ಲಿ ಕರಾವಳಿ, ಉತ್ತರ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಭಾರಿ ಮಳೆ ಯಾಗುವ ಸಾಧ್ಯತೆ ಇದೆ ಎಂದು ಹವಾ ಮಾನ ಇಲಾಖೆ ಮುನ್ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.