ADVERTISEMENT

ಕೆಂಪಯ್ಯ ಸೇರಿ ಯಾವುದೇ ಸಲಹೆಗಾರರೂ ಮುಂದುವರಿಯುವಂತಿಲ್ಲ: ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2018, 12:19 IST
Last Updated 28 ಮಾರ್ಚ್ 2018, 12:19 IST
ಕೆಂಪಯ್ಯ ಸೇರಿ ಯಾವುದೇ ಸಲಹೆಗಾರರೂ ಮುಂದುವರಿಯುವಂತಿಲ್ಲ: ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ಸ್ಪಷ್ಟನೆ
ಕೆಂಪಯ್ಯ ಸೇರಿ ಯಾವುದೇ ಸಲಹೆಗಾರರೂ ಮುಂದುವರಿಯುವಂತಿಲ್ಲ: ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ಸ್ಪಷ್ಟನೆ   

ಬೆಂಗಳೂರು: ರಾಜ್ಯದಲ್ಲಿ ಚುನಾವಣೆ ಘೋಷಣೆಯಾಗಿರುವುದರಿಂದ ಗೃಹ ಇಲಾಖೆ ಸಲಹೆಗಾರ ಕೆಂಪಯ್ಯ ತಮ್ಮ ಹುದ್ದೆಯಲ್ಲಿ ಮುಂದುವರಿಯುವಂತಿಲ್ಲ ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ಹೇಳಿದ್ದಾರೆ.

ಮುಖ್ಯಮಂತ್ರಿ ಅಥವಾ ಇತರರ ಸಚಿವರಿಗೆ ನೇಮಕಗೊಂಡಿದ್ದ ರಾಜಕೀಯ ಮತ್ತು ಇತರ ಸಲಹೆಗಾರರೂ ತಮ್ಮ ಹುದ್ದೆಗಳಲ್ಲಿ ಮುಂದುವರಿಯುವಂತಿಲ್ಲ ಎಂದು ಅವರು ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

ಕೆಂಪಯ್ಯ ಸಲಹೆಗಾರರಾಗಿ ಇನ್ನೂ ಮುಂದುವರಿದಿರುವ ಬಗ್ಗೆ ಬಿಜೆಪಿ ಮತ್ತು ಜೆಡಿಎಸ್‌ ಆಕ್ಷೇಪ ವ್ಯಕ್ತಪಡಿಸಿರುವುದನ್ನು ಅವರ ಗಮನಕ್ಕೆ ತಂದಾಗ, ‘ರಾಜಕೀಯ  ಮತ್ತು ಇತರ ರೀತಿಯ ಸಲಹೆಗಾರರು ಮುಂದುವರಿಯುವಂತಿಲ್ಲ. ಆ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇನೆ’ ತಿಳಿಸಿದರು.

ADVERTISEMENT

ಪೊಲೀಸ್‌ ಇಲಾಖೆ ಅಧಿಕಾರಿಗಳು ಹಸ್ತಕ್ಷೇಪ ಇಲ್ಲದೆ ಕರ್ತವ್ಯ ನಿರ್ವಹಿಸಲು ಕೆಂಪಯ್ಯ ಅಡ್ಡಿ ಆಗಿದ್ದಾರೆ ಎಂದು ಬಿಜೆಪಿ ಮತ್ತು ಜೆಡಿಎಸ್‌ ದೂರಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.