ADVERTISEMENT

ಕೊಡಗು ಜಿಲ್ಲೆಯಲ್ಲಿ ಮಳೆಯ ಸಿಂಚನ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2018, 13:25 IST
Last Updated 13 ಮಾರ್ಚ್ 2018, 13:25 IST
ತುಂತುರು ಮಳೆ -ಸಾಂದರ್ಭಿಕ ಚಿತ್ರ
ತುಂತುರು ಮಳೆ -ಸಾಂದರ್ಭಿಕ ಚಿತ್ರ   

ಮಡಿಕೇರಿ: ಕೊಡಗಿನ ವಿವಿಧೆಡೆ ಮಂಗಳವಾರ ಸಂಜೆ ತುಂತುರು ಮಳೆ ಸುರಿಯಿತು. ಒಂದು ವಾರದಿಂದ ಬಿಸಿಲ ಝಳ ಹೆಚ್ಚಾಗಿತ್ತು. ಮೊದಲ ತುಂತುರು ಮಳೆ ಜನರಿಗೆ ಸ್ವಲ್ಪಮಟ್ಟಿಗೆ ತಂಪೆರೆಯಿತು. 

ನಾಪೋಕ್ಲು, ತಲಕಾವೇರಿ, ಭಾಗಮಂಡಲ, ಚೇರಂಬಾಣೆ, ವಿರಾಜಪೇಟೆ, ಗೋಣಿಕೊಪ್ಪಲು, ಪಾಲಿಬೆಟ್ಟ, ಪೊನ್ನಂಪೇಟೆ, ಚೆನ್ನಂಗೊಲ್ಲಿ, ಹಾತೂರು, ಕುಂದ, ಬಿ. ಶೆಟ್ಟಿಗೇರಿಯಲ್ಲೂ ಸಂಜೆ ಮಳೆ ಹನಿಯಿತು. ಜಿಲ್ಲೆಯಾದ್ಯಂತ ಮಧ್ಯಾಹ್ನದ ಬಳಿಕ ಮೋಡ ಕವಿದ ವಾತಾವರಣವಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT