ADVERTISEMENT

ಕ್ವಾರಿಯಲ್ಲಿ ಮುಳುಗಿದ್ದ ಬಾಲಕನ ಶವ ಪತ್ತೆ: ಸೀಬರ್ಡ್‌ ನೌಕಾನೆಲೆ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2017, 4:22 IST
Last Updated 4 ಜುಲೈ 2017, 4:22 IST
ಕ್ವಾರಿಯಲ್ಲಿ ಮುಳುಗಿದ್ದ ಬಾಲಕನ ಶವ ಪತ್ತೆ: ಸೀಬರ್ಡ್‌ ನೌಕಾನೆಲೆ ಕಾರ್ಯಾಚರಣೆ
ಕ್ವಾರಿಯಲ್ಲಿ ಮುಳುಗಿದ್ದ ಬಾಲಕನ ಶವ ಪತ್ತೆ: ಸೀಬರ್ಡ್‌ ನೌಕಾನೆಲೆ ಕಾರ್ಯಾಚರಣೆ   

ಹುಬ್ಬಳ್ಳಿ: ತಾಲ್ಲೂಕಿನ ಪಾಳೆ ಗ್ರಾಮದ ಕ್ವಾರಿಯಲ್ಲಿ ಮುಳುಗಿದ್ದ ಬಾಲಕ ವಿದ್ಯಾಸಾಗರ್ ಹನುಮಕ್ಕನವರ್ (15)ಶವವನ್ನು ಸೀಬರ್ಡ್ ನೌಕಾನೆಲೆ ಸಿಬ್ಬಂದಿ ಹೊರತೆಗೆದರು. 

ಪಾಳೆ ಗ್ರಾಮದ ಕ್ವಾರಿಯಲ್ಲಿ ಮುಳುಗಿದ್ದ ಬಾಲಕನನ್ನು ಪತ್ತೆ ಹಚ್ಚುವ ಕಾರ್ಯಾಚರಣೆ ಮಂಗಳವಾರ ಬೆಳಗ್ಗಿನಿಂದ ಮತ್ತೆ ಆರಂಭಿಸಲಾಗಿತ್ತು. ಕಾರ್ಯಾಚರಣೆ ನಡೆಸಿದ  ಸೀ ಬರ್ಡ್ ನೌಕಾ ನೆಲೆಯ ತಜ್ಞರು 25 ನಿಮಿಷಗಳಲ್ಲಿ ಬಾಲಕನ ಶವವನ್ನು ಹೊರತೆಗೆದರು.

ಕ್ವಾರಿಯಲ್ಲಿ ಬಿದ್ದಿದ್ದ ಬಾಲಕನ ಶವ ಹೊರತೆಗೆದ ಕೂಡಲೇ ಸಂಬಂಧಿಕರ ದುಃಖ ಮುಗಿಲು ಮುಟ್ಟಿತು. ನೂಲ್ವಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಾಲಕನ ಮರಣೋತ್ತರ ಪರೀಕ್ಷೆ ನಡೆಸಲು ಸಿದ್ಧತೆ ಮಾಡಲಾಗಿದೆ.

ADVERTISEMENT

ಜಿಲ್ಲಾಧಿಕಾರಿ ಎಸ್.ಬಿ. ಬೊಮ್ಮನಹಳ್ಳಿ, ಉಪವಿಭಾಗಾಧಿಕಾರಿ ಮಹೇಶ ಕರ್ಜಗಿ, ತಹಶೀಲ್ದಾರ್ ಶಶಿಧರ ಮಾಡ್ಯಾಳ ಉಪಸ್ಥಿತಿರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.