ADVERTISEMENT

ಖಾಸಗಿ ಶಾಲೆಗಳ ದುಬಾರಿ ಶುಲ್ಕಕ್ಕೆ ಕಡಿವಾಣ

​ಪ್ರಜಾವಾಣಿ ವಾರ್ತೆ
Published 18 ಮೇ 2018, 19:30 IST
Last Updated 18 ಮೇ 2018, 19:30 IST
ಖಾಸಗಿ ಶಾಲೆಗಳ ದುಬಾರಿ ಶುಲ್ಕಕ್ಕೆ ಕಡಿವಾಣ
ಖಾಸಗಿ ಶಾಲೆಗಳ ದುಬಾರಿ ಶುಲ್ಕಕ್ಕೆ ಕಡಿವಾಣ   

ಬೆಂಗಳೂರು: ಖಾಸಗಿ ಹಾಗೂ ಅನುದಾನರಹಿತ ಶಾಲೆಗಳ ದುಬಾರಿ ಶುಲ್ಕ ವಸೂಲಿಗೆ ಅಂಕುಶ ಬಿದ್ದಿದೆ. ಇನ್ನು ಮುಂದೆ ಖಾಸಗಿ ಶಿಕ್ಷಣ ಸಂಸ್ಥೆ
ಗಳು ಒಟ್ಟಾರೆ ವೆಚ್ಚದ ಮೇಲೆ ಶೇ 15ಕ್ಕಿಂತ ಹೆಚ್ಚು ಶುಲ್ಕ ಪಡೆಯುವಂತಿಲ್ಲ.

ಕರ್ನಾಟಕ ಶಿಕ್ಷಣ ಸಂಘಗಳ (ವರ್ಗೀಕರಣ, ನಿಯಂತ್ರಣ ಮತ್ತು ಪಠ್ಯಕ್ರಮ ಇತ್ಯಾದಿ) ನಿಯಮಗಳು–2016ಕ್ಕೆ ತಿದ್ದುಪಡಿ ತರಲಾಗಿದೆ. ಹೊಸ ತಿದ್ದುಪಡಿ ನಿಯಮಗಳು–2018ರ ಪ್ರಕಾರ, ಖಾಸಗಿ ಹಾಗೂ ಅನುದಾರರಹಿತ ಶಾಲೆಗಳು ಆ ವರ್ಷ ಘೋಷಿಸಿದ ಶುಲ್ಕ ಹೊರತುಪಡಿಸಿ ಯಾವುದೇ ಹೆಚ್ಚುವರಿ ಶುಲ್ಕವನ್ನು ಪಡೆಯುವಂತಿಲ್ಲ.

ಅಲ್ಲದೆ, ಪ್ರತಿ ವರ್ಷ ಡಿಸೆಂಬರ್‌ 31ರೊಳಗೆ ಮುಂದಿನ ಶೈಕ್ಷಣಿಕ ವರ್ಷದ ಶುಲ್ಕದ ವಿವರಗಳನ್ನು ಬಹಿರಂಗಗೊಳಿಸಬೇಕು. ಶಾಲೆಯ ಲೆಕ್ಕಪರಿಶೋಧನಾ ವರದಿ, ಬೋಧಕರ ಸಂಖ್ಯೆ, ಫಲಿತಾಂಶ ಹಾಗೂ ಶುಲ್ಕವಿವರಗಳನ್ನು ಸೂಚನಾಫಲಕದಲ್ಲಿ ಪ್ರಕಟಿಸಬೇಕು. ಲೆಕ್ಕಪತ್ರಗಳಿಗೆ ಅನುಗುಣವಾಗಿಯೇ ಶುಲ್ಕ ನಿಗದಿಪಡಿಸಬೇಕು ಎಂದು ನಿಯಮಗಳಲ್ಲಿ ಹೇಳಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.