ADVERTISEMENT

ಚಾರ್ಮಾಡಿ ಘಾಟ್‌: ಗುಡ್ಡ ಕುಸಿತದ ಮಣ್ಣು ತೆರವು, ಸಂಚಾರ ಸರಾ

​ಪ್ರಜಾವಾಣಿ ವಾರ್ತೆ
Published 12 ಜೂನ್ 2018, 11:01 IST
Last Updated 12 ಜೂನ್ 2018, 11:01 IST
ಮಣ್ಣು ತೆರವು ಗೊಳಿಸುವ ಮುನ್ನ ರಸ್ತೆಯೇ ಕಾಣದಾಗಿತ್ತು
ಮಣ್ಣು ತೆರವು ಗೊಳಿಸುವ ಮುನ್ನ ರಸ್ತೆಯೇ ಕಾಣದಾಗಿತ್ತು   

ಮಂಗಳೂರು: ಚಾರ್ಮಾಡಿ ಘಾಟ್‌ ರಸ್ತೆಯಲ್ಲಿ ಗುಡ್ಡ ಕುಸಿತದಿಂದ ರಸ್ತೆಗೆ ಬಿದ್ದಿದ್ದ ಮಣ್ಣು ಮತ್ತು ಮರಗಳ ತೆರವು ಕಾರ್ಯಾಚರಣೆ ಅಂತ್ಯಗೊಂಡಿದೆ. ಈ ಮಾರ್ಗದಲ್ಲಿ ವಾಹನ ಸಂಚಾರ ಪುನರಾರಂಭವಾಗಿದೆ ಎಂದು ದಕ್ಷಿಣ ಕನ್ನಡ ಎಸ್ ಪಿ ಡಾ.ಬಿ.ಆರ್.ರವಿಕಾಂತೇಗೌಡ ತಿಳಿಸಿದ್ದಾರೆ.

ಎರಡೂ ಕಡೆಗಳಲ್ಲಿ ಒಟ್ಟು 210 ವಾಹನಗಳು ರಸ್ತೆ ಮಧ್ಯೆ ಸಿಲುಕಿದ್ದವು. ಅವುಗಳಲ್ಲಿ ಸುಮಾರು 1,500 ಮಂದಿ ಇದ್ದರು ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.