ADVERTISEMENT

‘ಧೈರ್ಯವಿದ್ದರೆ ಪರ್ಜನ್ಯ ಹೋಮ ತಡೆಯಲಿ’

​ಪ್ರಜಾವಾಣಿ ವಾರ್ತೆ
Published 2 ಜೂನ್ 2017, 19:30 IST
Last Updated 2 ಜೂನ್ 2017, 19:30 IST
‘ಧೈರ್ಯವಿದ್ದರೆ ಪರ್ಜನ್ಯ ಹೋಮ ತಡೆಯಲಿ’
‘ಧೈರ್ಯವಿದ್ದರೆ ಪರ್ಜನ್ಯ ಹೋಮ ತಡೆಯಲಿ’   

ಹುಬ್ಬಳ್ಳಿ: ‘ಮಳೆಗಾಗಿ ಪ್ರಾರ್ಥಿಸಿ ಸರ್ಕಾರದ ವತಿಯಿಂದಲೇ ಪರ್ಜನ್ಯ ಹೋಮ ಆಯೋಜಿಸಲಾಗುತ್ತಿದೆ. ಮೌಢ್ಯವಿರೋಧಿ ಕಾಯ್ದೆ ಜಾರಿಗೆ ತರುತ್ತೇನೆ ಎನ್ನುತ್ತಾ ತಿರುಗಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಧೈರ್ಯವಿದ್ದರೆ ಪರ್ಜನ್ಯ ಹೋಮ ತಡೆಯಲಿ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ಸವಾಲು ಹಾಕಿದರು.

ನಗರದ ನೆಹರೂ ಮೈದಾನದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ನೀರಾವರಿ ನಿಗಮದ ವತಿಯಿಂದ ₹20 ಲಕ್ಷ ಖರ್ಚು ಮಾಡಿ ಪರ್ಜನ್ಯ ಹೋಮ ಮಾಡಲಾಗುತ್ತಿದೆ. ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ತಮ್ಮ ಕೈಯಿಂದ ಹಣ ಖರ್ಚು ಮಾಡಿ ಈ ಹೋಮ ಮಾಡಿದರೆ ನಮ್ಮ ತಕರಾರಿಲ್ಲ. ಅದು ಅವರ ವೈಯಕ್ತಿಕ ನಂಬಿಕೆ ಎನಿಸಿಕೊಳ್ಳುತ್ತದೆ. ಆದರೆ, ಸರ್ಕಾರದ ದುಡ್ಡಿನಲ್ಲಿ ಇಂತಹ ಕಾರ್ಯಕ್ರಮ ಮಾಡುವುದು ಸರಿಯಲ್ಲ’ ಎಂದು ಅವರು ಹೇಳಿದರು.

‘ಸಿ.ಎಂ.ಗೆ ಅಹಂಕಾರ’: ‘ರಾಜ್ಯದಲ್ಲಿ ದುರಾಡಳಿತ ಹೆಚ್ಚಿದೆ. ಸರ್ಕಾರಿ ಆಸ್ಪತ್ರೆಗಳು ಅವ್ಯವಸ್ಥೆಯ ಆಗರವಾಗಿವೆ. ಆದರೆ, ಮುಖ್ಯಮಂತ್ರಿಗೆ ಅಹಂಕಾರ ಬಂದಿದೆ. ಉಪ ಚುನಾವಣೆಯಲ್ಲಿ ಗೆದ್ದ ಮೇಲಂತೂ ಈ ಅಹಂಕಾರ ಇನ್ನೂ ಹೆಚ್ಚಾಗಿದೆ’ ಎಂದು ಟೀಕಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.