ADVERTISEMENT

ನವೀನ್ ಜಾಮೀನು ಅರ್ಜಿ ವಿಚಾರಣೆ 13ಕ್ಕೆ ಮುಂದಕ್ಕೆ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2012, 19:30 IST
Last Updated 9 ನವೆಂಬರ್ 2012, 19:30 IST

ಮಂಗಳೂರು: ನಗರ ಹೊರವಲಯದ ಪಡೀಲ್ ಹೋಂ ಸ್ಟೇ ದಾಳಿ ಪ್ರಕರಣ ಸಂಬಂಧ ಬಂಧನದಲ್ಲಿರುವ ಪತ್ರಕರ್ತ ನವೀನ್ ಸೂರಿಂಜೆ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ನಗರದ ಮೂರನೇ ಜೆಎಂಎಫ್ ನ್ಯಾಯಾಲಯ ಮುಂದೂಡಿದೆ.

ಬುಧವಾರ ರಾತ್ರಿ ಬಂಧನಕ್ಕೊಳಗಾದ ಹೋಂ ಸ್ಟೇ ದಾಳಿ ಆರೋಪಿ ನವೀನ್ ಅವರಿಗೆ ಜಾಮೀನು ನೀಡಬೇಕು ಎಂದು ಅವರ ವಕೀಲ ಸತೀಶ್ ಬಂಟ್ವಾಳ್ ಗುರುವಾರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಶುಕ್ರವಾರ ಅರ್ಜಿ ಕೈಗೆತ್ತಿಕೊಂಡ ನ್ಯಾಯಾಲಯವು ಆರೋಪಿ ಪರ ವಾದವನ್ನು ಆಲಿಸಿತು. ಸರ್ಕಾರಿ ವಕೀಲರು ಜಾಮೀನು ನೀಡದಂತೆ ಆಕ್ಷೇಪ ಸಲ್ಲಿಸಿದ್ದು, ಅವರ ವಾದ ಆಲಿಸುವುದು ಬಾಕಿ ಇದೆ. ಹಾಗಾಗಿ ಅರ್ಜಿ ವಿಚಾರಣೆಯನ್ನು ಮುಂದೂಡಲಾಗಿದೆ. `

ಇನ್ನು ಮೂರು ದಿನಗಳ ಕಾಲ ನ್ಯಾಯಾಲಯದ ಕಲಾಪ ನಡೆಯುವುದಿಲ್ಲ. ಇದೇ 13ರಂದು ಅರ್ಜಿಯ ವಿಚಾರಣೆ ನಡೆಯಲಿದೆ~ ಎಂದು ಆರೋಪಿ ಪರ ವಕೀಲ ಸತೀಶ್ ಬಂಟ್ವಾಳ್ `ಪ್ರಜಾವಾಣಿ~ಗೆ ತಿಳಿಸಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.