ADVERTISEMENT

ಪೊಲೀಸ್‌ ಬಲೆಗೆ ನಕಲಿ ಅಧಿಕಾರಿ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2018, 19:47 IST
Last Updated 30 ಮಾರ್ಚ್ 2018, 19:47 IST
ಸೌಮ್ಯರಂಜನ್
ಸೌಮ್ಯರಂಜನ್   

ಮಡಿಕೇರಿ: ಮುಂಬೈ ಕಂದಾಯ ಇಲಾಖೆಯಲ್ಲಿ ಪ್ರಾದೇಶಿಕ ಆಯುಕ್ತನೆಂದು ಪರಿಚಯಿಸಿಕೊಂಡು ಸರ್ಕಾರಿ ಕಾರು, ರೆಸಾರ್ಟ್ ಸೌಲಭ್ಯ ಹಾಗೂ ಗನ್‌ಮ್ಯಾನ್‌ ನೀಡುವಂತೆ ಕೊಡಗು ಜಿಲ್ಲಾಧಿಕಾರಿಗೆ ಕರೆ ಮಾಡಿದ್ದ ವ್ಯಕ್ತಿಯೊಬ್ಬ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಒಡಿಶಾ ರಾಜ್ಯದ ಪೂರಿ ಜಿಲ್ಲೆ, ಸುಕಿಗೋಪಾಲ್‌ ತಾಲ್ಲೂಕಿನ ಬೀರಾರಾಂ ಚಂದ್ರಪುರಂ ಗ್ರಾಮದ ಸೌಮ್ಯರಂಜನ್‌ ಮಿಶ್ರ (32) ಬಂಧಿತ ಆರೋಪಿ. ಎಂಸಿಎ ಪದವೀಧರನಾಗಿದ್ದು, ಇಎಸ್‌ಐ ಕಚೇರಿಯಲ್ಲಿ ಸಾಫ್ಟ್‌ವೇರ್‌ ಡೆವಲಪರ್‌ ಆಗಿ ಗುತ್ತಿಗೆ ಆಧಾರದಲ್ಲಿ ಈ ಹಿಂದೆ ಕೆಲಸ ಮಾಡಿದ್ದ.

‘ಬುಧವಾರ ಮೈಸೂರು ಮಹಾನಗರ ಪಾಲಿಕೆ ಆಯುಕ್ತರಿಗೆ ಕರೆ ಮಾಡಿ ಪ್ರಾದೇಶಿಕ ಆಯುಕ್ತನೆಂದು ಪರಿಚಯಿಸಿಕೊಂಡು, ಕಾರು ಪಡೆದು ವಿರಾಜಪೇಟೆಯ ರೆಸಾರ್ಟ್‌ಯಲ್ಲಿ ತಂಗಿದ್ದ. ಡಿವೈಎಸ್‌ಪಿ ನಾಗಪ್ಪ ಅವರಿಗೆ ಕರೆ ಮಾಡಿ, ಪ್ರವಾಸಕ್ಕೆ ಬಂದಿದ್ದು ಭದ್ರತೆಗಾಗಿ ಗನ್‌ಮ್ಯಾನ್‌ ಒದಗಿಸುವಂತೆ ಬೇಡಿಕೆಯಿಟ್ಟಿದ್ದ. ಅಲ್ಲದೇ, ಜಿಲ್ಲಾಧಿಕಾರಿ ಸಹಾಯಕರಾದ ಶ್ರೀವಿದ್ಯಾ ಅವರಿಗೂ ಕರೆ ಮಾಡಿ, ಸರ್ಕಾರಿ ಸೌಲಭ್ಯ ಪಡೆಯಲು ಯತ್ನಿಸಿದ್ದ. ಅನುಮಾನಗೊಂಡು ಪರಿಶೀಲನೆ ನಡೆಸಿದಾಗ ವಂಚನೆಗೆ ಯತ್ನಿಸಿರುವುದು ಬೆಳಕಿಗೆ ಬಂದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.