ADVERTISEMENT

‘ಪ್ರಧಾನಿಯಾಗಿರುವುದು ಸುಲಭದ ಮಾತಲ್ಲ!’: ಮೋದಿ ವಿರುದ್ಧ ರಮ್ಯಾ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2018, 14:32 IST
Last Updated 14 ಏಪ್ರಿಲ್ 2018, 14:32 IST
ರಮ್ಯಾ ಟ್ವಿಟರ್‌ನಲ್ಲಿ ಪ್ರಕಟಿಸಿರುವ ಚಿತ್ರ
ರಮ್ಯಾ ಟ್ವಿಟರ್‌ನಲ್ಲಿ ಪ್ರಕಟಿಸಿರುವ ಚಿತ್ರ   

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್‌ನ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ ಟ್ವಿಟರ್‌ನಲ್ಲಿ ವ್ಯಂಗ್ಯವಾಡಿದ್ದಾರೆ.

ಮೋದಿ ಅವರು ಕೈ ಮುಂದೆ ಮಾಡಿರುವ ಚಿತ್ರ ಪ್ರಕಟಿಸಿರುವ ರಮ್ಯಾ, ಅದರ ಮೇಲ್ಭಾಗದಲ್ಲಿ ‘ಪ್ರಧಾನಿಯಾಗಿರುವುದು ನನಗೆ ಸುಲಭದ ಮಾತಲ್ಲ!’ ಎಂಬ ಬರಹ ಪ್ರಕಟಿಸಿದ್ದಾರೆ. ಚಿತ್ರದ ಕೆಳಭಾಗದಲ್ಲಿ ‘2019ರಲ್ಲಿ ಈ ಚಿಹ್ನೆಗೆ ಮತ ನೀಡಿ’ ಎಂದು ‘ಕೈ’ಯನ್ನು ಉದ್ದೇಶಿಸಿ ಬರೆಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT