ADVERTISEMENT

ಬಂದೂಕು ವಶಪಡಿಸಿಕೊಳ್ಳದಿರಲು ಸೂಚನೆ

ಮುತ್ತಪ್ಪ ರೈ ಭದ್ರತಾ ಸಿಬ್ಬಂದಿ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2014, 19:30 IST
Last Updated 17 ಮಾರ್ಚ್ 2014, 19:30 IST

ಬೆಂಗಳೂರು: ಜಯ ಕರ್ನಾಟಕ ಸಂಘ­ಟನೆಯ ಮುಖಂಡ ಎನ್‌. ಮುತ್ತಪ್ಪ ರೈ ಅವರ ಖಾಸಗಿ ಭದ್ರತಾ ಸಿಬ್ಬಂದಿಯ ಬಂದೂಕು­ಗಳನ್ನು ಸರ್ಕಾರಕ್ಕೆ ಶರಣಾ­ಗಿಸಬೇಕು ಎಂಬ ಒತ್ತಾಯ ಮಾಡ­ಬಾರದು ಎಂದು ಹೈಕೋರ್ಟ್‌ ಸೋಮ­­ವಾರ ಮಧ್ಯಾಂತರ ಆದೇಶ ನೀಡಿದೆ. ‘ನಾನು ಖಾಸಗಿ ಭದ್ರತಾ ಸಿಬ್ಬಂದಿ ಹೊಂದಿದ್ದೇನೆ. ಆದರೆ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿ­ರುವ ಕಾರಣ, ಬಂದೂಕು ಹೊಂದಿ­ರುವವರು ಅದನ್ನು ಸರ್ಕಾರಕ್ಕೆ ಒಪ್ಪಿಸ­­ಬೇಕು ಎಂಬ ಸೂಚನೆ ಬಂದಿದೆ. ನನಗೆ ಜೀವ ಬೆದರಿಕೆ ಇರುವ ಕಾರಣ, ಪೊಲೀಸ್‌ ಭದ್ರತೆ ಕಲ್ಪಿಸಬೇಕು’ ಎಂದು ರೈ ಹೈ­ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಇದರ ವಿಚಾರಣೆಯನ್ನು ನ್ಯಾಯ­ಮೂರ್ತಿ ಎಸ್‌. ಅಬ್ದುಲ್‌ ನಜೀರ್‌ ನಡೆ­ಸಿ­­ದರು. ‘ರೈ ಅವರಿಗೆ ಈ ಸಂದರ್ಭ­ದಲ್ಲಿ ಪೊಲೀಸ್‌ ಭದ್ರತೆ ನೀಡಲು ಸಾಧ್ಯವಿಲ್ಲ’ ಎಂದು ಸರ್ಕಾರಿ ವಕೀಲ ವಿಜಯ­ಕುಮಾರ್‌ ಪಾಟೀಲ ಅವರು ಪೀಠಕ್ಕೆ ತಿಳಿಸಿದರು. ಇದನ್ನು ದಾಖಲು ಮಾಡಿಕೊಂಡ ಪೀಠ, ‘ರೈ ಅವರ ಖಾಸಗಿ ಭದ್ರತಾ ಸಿಬ್ಬಂದಿ­ಯ ಬಂದೂ­ಕು­ಗಳನ್ನು ಹಸ್ತಾಂ­ತರ ಮಾಡು­ವಂತೆ 3 ತಿಂಗಳ ಕಾಲ ಒತ್ತಾಯಿ­ಸಬೇಡಿ’ ಎಂದು ಸರ್ಕಾರಕ್ಕೆ ಸೂಚಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.