ಕೃಷಿ
* 130 ಲಕ್ಷ ಟನ್ ಆಹಾರ ಧಾನ್ಯ ಉತ್ಪಾದನೆ ಗುರಿ.
* ಹನಿ ನೀರಾವರಿ ಅಳವಡಿಸಲು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ರೈತರಿಗೆ ಶೇ 90 ಹಾಗೂ ಇತರರಿಗೆ ಶೇ 75 ಸಹಾಯ ಧನ. ಅರ್ಜಿ ಸಲ್ಲಿಸಿದ ಎಲ್ಲರಿಗೂ ಸೌಲಭ್ಯ.
* ಸಾವಯವ ಕೃಷಿ ಯೋಜನೆ ಹೋಬಳಿ ಮಟ್ಟಕ್ಕೆ ವಿಸ್ತರಣೆ.
* ಇಕ್ರಿಸ್ಯಾಟ್ ನೇತೃತ್ವದಲ್ಲಿ ಪ್ರತಿ ಕಂದಾಯ ವಿಭಾಗದ ಒಂದು ಜಿಲ್ಲೆಯಲ್ಲಿ ಸಂಶೋಧನೆ ಆಧಾರಿತ ಕೃಷಿ ಪದ್ಧತಿ ಅನುಷ್ಠಾನ.
* ಐದು ಅಶ್ವಶಕ್ತಿವರೆಗೆ ಸೌರಶಕ್ತಿ ಚಾಲಿತ ನೀರಾವರಿ ಪಂಪ್‌ಸೆಟ್‌ಗಳನ್ನು ಒದಗಿಸುವ ಯೋಜನೆ ಉತ್ತರ ಹಾಗೂ ದಕ್ಷಿಣ ಕರ್ನಾಟಕದ ತಲಾ ಒಂದು ಜಿಲ್ಲೆಯಲ್ಲಿ ಜಾರಿ.
* ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಕೃಷಿ ವಿಷಯದ ಅಳವಡಿಕೆ.
* ಹೊಸತಳಿ ಆವಿಷ್ಕಾರ ಹಾಗೂ ತಂತ್ರಜ್ಞಾನ ಸುಧಾರಣೆ ಕುರಿತ ಅಧ್ಯಯನಕ್ಕಾಗಿ ಕೃಷಿ ವಿ.ವಿಗಳಿಗೆ 5 ಕೋಟಿ.
* ಮೈಸೂರು ಮತ್ತು ರಾಯಚೂರಿನಲ್ಲಿ ವೈಜ್ಞಾನಿಕ ವರ್ಗೀಕರಣ ಕೇಂದ್ರಕ್ಕೆ 3.5 ಕೋಟಿ.
* 100 ಕೇಂದ್ರಗಳಲ್ಲಿ ಉಗ್ರಾಣ ಆಧಾರಿತ ಕೃಷಿ ಉತ್ಪನ್ನ ಮಾರಾಟಕ್ಕೆ ಅವಕಾಶ ಕಲ್ಪಿಸಲು 5 ಕೋಟಿ
* ಕೃಷಿ ಮಾರುಕಟ್ಟೆ ಸುಧಾರಣಾ ಸಮಿತಿ ವರದಿ ಪ್ರಸಕ್ತ ವರ್ಷ ಜಾರಿ.
* ರೈತರಿಗೆ ಹೊಸ ತಂತ್ರಜ್ಞಾನ ಕುರಿತು ಮಾಹಿತಿ ಒದಗಿಸಲು ಏಕಗವಾಕ್ಷಿ ಯೋಜನೆ.
* ಬಿತ್ತನೆ ಬೀಜ ಸ್ವಂತ ಅಭಿವೃದ್ಧಿ ಮಾಡಿಕೊಳ್ಳವ ರೈತರಿಗೆ ಉತ್ತೇಜನ; ಈ ಯೋಜನೆಗೆ 10 ಕೋಟಿ
* ಕೃಷಿ ಯಾಂತ್ರೀಕರಣ ಯೋಜನೆಯಲ್ಲಿ ಕೃಷಿ ಯಂತ್ರೋಪಕರಣ ಹಾಗೂ ಕೃಷಿ ಸಂಸ್ಕರಣಾ ಘಟಕ ಸ್ಥಾಪನೆಗೆ ರೂ 150 ಕೋಟಿ.
* ಆಯ್ದ 4 ಜಿಲ್ಲೆಗಳಲ್ಲಿ ಮಾರ್ಪಡಿಸಿದ ರಾಷ್ಟ್ರೀಯ ಕೃಷಿ ವಿಮಾ ಯೋಜನೆ ಜಾರಿ.
* ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಮಳೆಮಾಪನ ಕೇಂದ್ರ.
ತೋಟಗಾರಿಕೆ
* ರೈತ ನಾಯಕ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ನೆನಪಿನಲ್ಲಿ ಚಾಮರಾಜನಗರ ಜಿಲ್ಲೆ ಹೊಂಡರಬಾಳು ಗ್ರಾಮದಲ್ಲಿ ಸ್ಥಾಪಿಸಿರುವ `ಅಮೃತಭೂಮಿ' ಟ್ರಸ್ಟ್‌ಗೆ 5 ಕೋಟಿ.
* ಅಡಿಕೆ ತೋಟಗಳಲ್ಲಿ ಲಾಭದಾಯಕ ಪರ್ಯಾಯ ಬೆಳೆ ಕೃಷಿ ಪ್ರಾತ್ಯಕ್ಷಿಕೆಗೆ 2 ಕೋಟಿ.
* ದುಂಡಾಣು ರೋಗದ ಸಮಸ್ಯೆ ಎದುರಿಸುತ್ತಿರುವ ದಾಳಿಂಬೆ ಬೆಳೆಗಾರರಿಗೆ ಸಹಾಯಧನ ಒದಗಿಸಲು ರಾಜ್ಯದ ಪಾಲಿನ ಬಾಕಿ 12.5 ಕೋಟಿ ಬಿಡುಗಡೆ.
ಪಶುಸಂಗೋಪನೆ
* ಬೀದರ್, ಶಿವಮೊಗ್ಗ ಮತ್ತು ಹಾಸನ ಪಶುವೈದ್ಯ ಕಾಲೇಜುಗಳು ಹಾಗೂ ಗುಲ್ಬರ್ಗ ಡೇರಿ ಕಾಲೇಜಿಗೆ ಮೂಲಸೌಕರ್ಯ ಒದಗಿಸಲು 73 ಕೋಟಿ.
* 391 ಪಶುವೈದ್ಯರು ಹಾಗೂ 642 ಪಶು ವೈದ್ಯಕೀಯ ಸಹಾಯಕರ ನೇಮಕ.
* ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಜಾನುವಾರು ಮತ್ತು ಕುಕ್ಕುಟ ಅಭಿವೃದ್ಧಿಗಾಗಿ 75 ಕೋಟಿ.
* ಪ್ರತಿ ಕಂದಾಯ ವಿಭಾಗದಲ್ಲಿ ಒಂದು ಪಶು ವೈದ್ಯಕೀಯ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಬೆಂಗಳೂರಿನ ದಂಡು ಪ್ರದೇಶದಲ್ಲಿ ಪಶು ವೈದ್ಯಕೀಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ. ಂಗಳೂರಿನಲ್ಲಿ ಪಶುಭವನ ನಿರ್ಮಾಣ.
* ಎಮ್ಮೆ, ಕುರಿ, ಮೇಕೆ ತಳಿಗಳ ಸಂರಕ್ಷಣೆ ಹಾಗೂ ಕೃತಕ ಗರ್ಭಧಾರಣೆ ಕಾರ್ಯಕ್ರಮಕ್ಕೆ 2 ಕೋಟಿ.
* 174 ತಾಲ್ಲೂಕುಗಳಲ್ಲಿ ಸಂಚಾರಿ ಪಶು ಚಿಕಿತ್ಸಾಲಯಗಳಿಗೆ ವಾಹನ ಒದಗಿಸಲು4.2 ಕೋಟಿ.
ರೇಷ್ಮೆ
* ರೇಷ್ಮೆ ಗೂಡಿನ ಮಾರುಕಟ್ಟೆಗಳ ಆಧುನೀಕರಣಕ್ಕೆ 5 ಕೋಟಿ.
* ಕಚ್ಚಾ ರೇಷ್ಮೆ ಮೇಲೆ ಅದರ ಮೌಲ್ಯದ ಶೇ 70ರಷ್ಟು ಒತ್ತೆ ಸಾಲ.
* 3 ಎ.ಆರ್.ಎಂ. ಘಟಕಗಳ ಸ್ಥಾಪನೆ.
ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ ಉಪಕರಣ ಖರೀದಿ ಹಾಗೂ ಶೆಡ್‌ಗಳ ನಿರ್ಮಾಣಕ್ಕೆ ನೆರವು.
* ಮೈಸೂರು ಜಿಲ್ಲೆಯಲ್ಲಿರುವ ರಾಜ್ಯ ರೇಷ್ಮೆ ಉದ್ಯಮಗಳ ನಿಗಮದ ಹಳೆಯ ಘಟಕಗಳ ಆಧುನೀಕರಣಕ್ಕೆ 5 ಕೋಟಿ.
ಮೀನುಗಾರಿಕೆ
* ಮೀನುಗಾರಿಕೆ ಬಂದರು ಮತ್ತು ಇಳಿದಾಣ ಕೇಂದ್ರಗಳಲ್ಲಿ ಸಿವಿಲ್ ಕಾಮಗಾರಿಗಳ ಯೋಜನಾ ಅನುಷ್ಠಾನ ಘಟಕ ಸ್ಥಾಪನೆ.
* ಒಳನಾಡಿನ 2 ಸಾವಿರ ಮೀನುಗಾರರಿಗೆ ಫೈಬರ್ ಗ್ಲಾಸ್ ಹರಿಗೋಲು.
* ಮೀನುಗಾರರಿಗೆ ಉಚಿತವಾಗಿ ನೀಡುವ ಸಲಕರಣೆಗಳ ಕಿಟ್‌ನ ಮೌಲ್ಯ ಐದು ಸಾವಿರ ರೂಪಾಯಿಯಿಂದ ಹತ್ತು ಸಾವಿರ ರೂಪಾಯಿಗೆ ಹೆಚ್ಚಳ.
* ಬಲೆ ದುರಸ್ತಿ ಶೆಡ್‌ಗಳ ನಿರ್ಮಾಣಕ್ಕೆ 2 ಕೋಟಿ.
* ಮೀನುಗಾರಿಕೆಯಲ್ಲಿ ತೊಡಗಿರುವ 5,000 ಮಹಿಳೆಯರಿಗೆ ಮಂಜುಗಡ್ಡೆ ಪೆಟ್ಟಿಗೆ ವಿತರಿಸಲು 2 ಕೋಟಿ.
* ಮೀನುಗಾರಿಕೆ ತಾಣಗಳ ಸಂಪರ್ಕ ರಸ್ತೆ ನಿರ್ಮಾಣಕ್ಕೆ 30 ಕೋಟಿ.
* ಮಂಗಳೂರು ಮೀನುಗಾರಿಕೆ ಕಾಲೇಜು ಅಭಿವೃದ್ಧಿಗೆ 4 ಕೋಟಿ.
* ಸಿಹಿನೀರು ಮೀನುಮರಿ ಬಿತ್ತನೆಗೆ 2 ಕೋಟಿ.
* ಮಂಗಳೂರಿನ ಕುಳಾಯಿ ಹಾಗೂ ಉಡುಪಿ ಜಿಲ್ಲೆ ಹೆಜಮಾಡಿ ಕೋಡಿಯಲ್ಲಿ ಮೀನುಗಾರಿಕೆ ಬಂದರು ನಿರ್ಮಾಣ.
* ಭಟ್ಕಳ ಮತ್ತು ಕಾರವಾರ ಮೀನುಗಾರಿಕೆ ಬಂದರುಗಳಲ್ಲಿ ಧಕ್ಕೆಗಳ ವಿಸ್ತರಣೆ.
* ಏಳು ಅಳಿವೆಗಳಲ್ಲಿ ತಡೆಗೋಡೆಗಳ ನಿರ್ಮಾಣ.
ಸಹಕಾರ
* ಸಹಕಾರ ಚುನಾವಣಾ ಆಯೋಗಕ್ಕೆ 3 ಕೋಟಿ.
* ಸಹಕಾರ ಸಂಸ್ಥೆಗಳಿಂದ ರಚನೆಯಾಗಿರುವ ಸ್ವಸಹಾಯ ಗುಂಪುಗಳಿಗೆ ಶೇ 4ರ ಬಡ್ಡಿ ದರದಲ್ಲಿ ಸಾಲ ನೀಡುವ ಯೋಜನೆ ಮುಂದುವರಿಕೆ.
* ಪಿಕಾರ್ಡ್ ಬ್ಯಾಂಕ್‌ಗಳು, ತಾಲ್ಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರಿ ಸಂಘಗಳು ಹಾಗೂ ವ್ಯವಸಾಯ ಸೇವಾ ಸಹಕಾರ ಸಂಘಗಳ ಹೊಸ ಕಟ್ಟಡ ನಿರ್ಮಾಣ ಮತ್ತು ದುರಸ್ತಿಗೆ 10 ಕೋಟಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.