ADVERTISEMENT

ಮಳವಳ್ಳಿಯಲ್ಲಿ 9 ಸೆಂ.ಮೀ. ಮಳೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2017, 19:30 IST
Last Updated 7 ಅಕ್ಟೋಬರ್ 2017, 19:30 IST

ಬೆಂಗಳೂರು: ಶನಿವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ರಾಜ್ಯದ ಕರಾವಳಿ ಮತ್ತು ಒಳನಾಡಿನ ಹಲವೆಡೆ ಮಳೆಯಾಗಿದೆ.

ಮಳವಳ್ಳಿಯಲ್ಲಿ 9, ಭರಮಸಾಗರದಲ್ಲಿ 8, ಮಂಕಿ, ಆಗುಂಬೆ, ದಾವಣಗೆರೆಯಲ್ಲಿ ತಲಾ 7 ಸೆಂ.ಮೀ. ಮಳೆಯಾಗಿದೆ.

ಕೊಪ್ಪಳ, ಸೈದಾಪುರ, ತಾವರೆಗೆರೆ, ಚನ್ನರಾಯಪಟ್ಟಣ, ಚಿತ್ರದುರ್ಗ, ರಾಮನಗರ, ಹುಲಿಯೂರುದುರ್ಗದಲ್ಲಿ ತಲಾ 6, ಕೋಟ, ಶಿರಾಲಿ, ಬೆಂಗಳೂರಿನ ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ ತಲಾ 5, ಶಿಗ್ಗಾವಿ, ಬಬಲೇಶ್ವರ, ಲಿಂಗಸೂಗೂರು, ಶ್ರೀರಂಗಪಟ್ಟಣದಲ್ಲಿ ತಲಾ 4, ಮಂಗಳೂರು, ಗೇರುಸೊಪ್ಪ, ಗೋಕಾಕ್‌, ನರಗುಂದ, ಕೊಪ್ಪ, ಮಂಡ್ಯ, ಹಗರಿಬೊಮ್ಮನಹಳ್ಳಿಯಲ್ಲಿ ತಲಾ 3 ಸೆಂ.ಮೀ. ಮಳೆ ಸುರಿದಿದೆ.

ADVERTISEMENT

ಹೊನ್ನಾವರ, ಹುಕ್ಕೇರಿ, ಹಿರೇಕೆರೂರು, ಯಲಬುರ್ಗಾ, ವಿಜಯಪುರ, ಆಲಮಟ್ಟಿ, ಬಸವನ ಬಾಗೇವಾಡಿ, ಯಡ್ರಾಮಿ, ಕೆಂಬಾವಿ, ಭಾಗಮಂಡಲ, ಅನವಟ್ಟಿ, ಮೂಡಿಗೆರೆ, ಕಮ್ಮರಡಿ, ಕುಡತಿನಿ, ಹೊಸಕೋಟೆ, ನಾಯಕನಹಟ್ಟಿಯಲ್ಲಿ ತಲಾ 2, ಸುಳ್ಯ, ಕಾರ್ಕಳ, ಜಮಖಂಡಿ, ಚಿತ್ತಾಪುರ, ಸೇಡಂ, ಹುಂಚದಕಟ್ಟೆ, ಬಾಳೆಹೊನ್ನೂರು, ತರೀಕೆರೆ, ಆಲೂರು, ತಿಪಟೂರು, ಮಾಗಡಿ, ಕೋಲಾರ, ಉಚ್ಚಂಗಿದುರ್ಗದಲ್ಲಿ ತಲಾ 1 ಸೆಂ.ಮೀ. ಮಳೆ ಬಿದ್ದಿದೆ.

ಕಲಬುರ್ಗಿಯಲ್ಲಿ 32.5 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ಉಷ್ಣಾಂಶ ಮತ್ತು ದಾವಣಗೆರೆಯಲ್ಲಿ 19.8 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಹವಾಮಾನ ಮುನ್ಸೂಚನೆ: ಮುಂದಿನ 48 ಗಂಟೆಗಳಲ್ಲಿ ರಾಜ್ಯದ ಉತ್ತರ ಒಳನಾಡಿನ ಹಲವೆಡೆ ಮತ್ತು ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಕೆಲವು ಪ್ರದೇಶಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.