ಬೆಂಗಳೂರು: ಮತಪತ್ರ ಮುದ್ರಣದಲ್ಲಿನ ಲೋಪದ ಕಾರಣದಿಂದ ಯುವ ಕಾಂಗ್ರೆಸ್ನ ವಿಧಾನಸಭಾ ಮತ್ತು ಲೋಕಸಭಾ ಕ್ಷೇತ್ರವಾರು ಸಮಿತಿಗಳು ಹಾಗೂ ಪ್ರದೇಶ ಸಮಿತಿ ಪದಾಧಿಕಾರಿಗಳ ಚುನಾವಣೆಯನ್ನು ಮುಂದೂಡಲಾಗಿದೆ. ಆದರೆ ಹೊಸ ದಿನಾಂಕವನ್ನು ಇನ್ನೂ ಪ್ರಕಟಿಸಿಲ್ಲ.
ಸೋಮವಾರ ಮತ್ತು ಮಂಗಳವಾರ ಯುವ ಕಾಂಗ್ರೆಸ್ ಸಮಿತಿಯ ಕೊನೆಯ ಹಂತದ ಚುನಾವಣೆ ನಡೆಯಬೇಕಿತ್ತು, ಪ್ರದೇಶ ಯುವ ಕಾಂಗ್ರೆಸ್ ಸಮಿತಿಗೆ ಸ್ಪರ್ಧಿಸಿದ್ದ 50 ಅಭ್ಯರ್ಥಿಗಳಲ್ಲಿ 13 ಮಂದಿಯ ಕ್ರಮಸಂಖ್ಯೆ ಮತ್ತು ಚಿಹ್ನೆ ಅದಲು ಬದಲಾಗಿದ್ದವು. ಸೋಮವಾರ ಬೆಳಿಗ್ಗೆ ಮತದಾನ ಆರಂಭವಾಗುತ್ತಿದ್ದಂತೆಯೇ ಮತಪತ್ರದಲ್ಲಿ ಲೋಪಗಳಿರುವುದು ಬಹಿರಂಗವಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.