ADVERTISEMENT

‘ರಾಜ್ಯದಲ್ಲಿ 736 ರೈತರ ಆತ್ಮಹತ್ಯೆ’

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2017, 19:30 IST
Last Updated 14 ನವೆಂಬರ್ 2017, 19:30 IST
‘ರಾಜ್ಯದಲ್ಲಿ 736 ರೈತರ ಆತ್ಮಹತ್ಯೆ’
‘ರಾಜ್ಯದಲ್ಲಿ 736 ರೈತರ ಆತ್ಮಹತ್ಯೆ’   

ಬೆಳಗಾವಿ: 2016–17ನೇ ಸಾಲಿನಲ್ಲಿ ರಾಜ್ಯದಲ್ಲಿ 758 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳು ವರದಿಯಾಗಿದ್ದು, 736 ರೈತರ ಕುಟುಂಬದ ಸದಸ್ಯರಿಗೆ ಪರಿಹಾರ ನೀಡಲಾಗಿದೆ ಎಂದು ಕೃಷಿ ಸಚಿವ ಕೃಷ್ಣಬೈರೇಗೌಡ ಉತ್ತರಿಸಿದರು.

ಸದಸ್ಯ ರಮೇಶ್‌ಬಾಬು ಕೇಳಿದ ಪ್ರಶ್ನೆಗೆ, 13–14ರಲ್ಲಿ 593, 14–15ರಲ್ಲಿ 599 ಹಾಗೂ 15–16ರಲ್ಲಿ 492 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರು.

31.50 ಲಕ್ಷ ತೆಂಗಿನ ಮರ ನಾಶ: ಕಳೆದ ಒಂದೂವರೆ ವರ್ಷದಲ್ಲಿ ನುಸಿ ಪೀಡೆ ಹಾಗೂ ಸುಳಿ ರೋಗದಿಂದ ರಾಜ್ಯದಲ್ಲಿ 31.50 ಲಕ್ಷ ತೆಂಗಿನ ಮರಗಳು ಹಾನಿಗೆ ಒಳಗಾಗಿವೆ ಎಂದು ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ತಿಳಿಸಿದರು.

ADVERTISEMENT

ಸದಸ್ಯ ರಮೇಶ್‌ಬಾಬು ಪ್ರಶ್ನೆಗೆ, 2.08 ಲಕ್ಷ ಹೆಕ್ಟೇರ್‌ ತೆಂಗಿನ ಹಾಗೂ 1.08 ಲಕ್ಷ ಹೆಕ್ಟೇರ್‌ ಅಡಿಕೆ ತೋಟಗಳು ಬರದಿಂದ ಹಾನಿಯಾಗಿವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.