ADVERTISEMENT

ರೈತರ ಬೆಳೆಗೆ ಸೀರೆಗಳೇ ಶ್ರೀರಕ್ಷೆ..!

​ಪ್ರಜಾವಾಣಿ ವಾರ್ತೆ
Published 5 ಜನವರಿ 2014, 20:25 IST
Last Updated 5 ಜನವರಿ 2014, 20:25 IST

ಗುರುಮಠಕಲ್‌: ಪಟ್ಟಣದ ಸುತ್ತಮುತ್ತ­ಲಿನ ಗ್ರಾಮಗಳ ರೈತರ ಬೆಳೆಗಳಿಗೆ ಸೀರೆಗಳೇ ಶ್ರೀರಕ್ಷೆಯಾಗಿವೆ!

ನೆರೆಯ ಆಂಧ್ರಪ್ರದೇಶದಲ್ಲಿ ಈ ರೀತಿ ಸೀರೆಗಳನ್ನು ಬಳಸಿ ಬೆಳೆಗಳ ರಕ್ಷಣೆ ಮಾಡುವುದು ಸಾಮಾನ್ಯ. ಇದೇ ಮಾದರಿಯನ್ನು ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರು ಅನುಸರಿಸತೊಡಗಿದ್ದಾರೆ.

ಪಟ್ಟಣದ ಸುತ್ತ ಗುಡ್ಡಗಾಡು ಪ್ರದೇಶ ಇರುವುದರಿಂದ ಕಾಡು ಹಂದಿಗಳ ಹಾವಳಿ ಹೆಚ್ಚಾಗಿದೆ. ಜೋಳ, ಶೇಂಗಾ ಮತ್ತು ಕಡಲೆ ಬೆಳೆಗೆ ಕಾಡು ಹಂದಿಗಳ ಹಾವಳಿ ಜಾಸ್ತಿ. ರಕ್ಷಣೆಗಾಗಿ ರೈತರು ಈ ರೀತಿಯ ಸುಲಭ ಉಪಾಯ ಮಾಡಿದ್ದಾರೆ.

ರೈತರು ಹೊಲದ ಸುತ್ತ ಸೀರೆಗಳ ಪರದೆಯನ್ನು ಕಟ್ಟುವುದರಿಂದ ಹೊಲಗಳಿಗೆ ಹಂದಿಗಳು ಬರುವುದಿಲ್ಲ. ಬಣ್ಣ ಬಣ್ಣದ ಸೀರೆಗಳು ಗಾಳಿಗೆ ಅಲ್ಲಾಡುತ್ತವೆ. ಅವು ಶಬ್ದ ಉಂಟು ಮಾಡುತ್ತವೆ. ಅಲ್ಲದೇ ಬೆಳದಿಂಗಳಲ್ಲಿ ಸೀರೆ ಪ್ರತಿಫಲಿಸುತ್ತಿರುವುದನ್ನು ಕಂಡ ಹಂದಿಗಳು ಬೆದರಿ ವಾಪಾಸಾಗುತ್ತವೆ. ಅದಕ್ಕಾಗಿ  ಹೈದರಾಬಾದ್‌ ನಿಂದ ಹಳೆಯ ಸೀರೆಗಳನ್ನು ಅಗ್ಗದ ದರದಲ್ಲಿ ಕ್ವಿಂಟಲ್‌ ಲೆಕ್ಕದಲ್ಲಿ ತಂದು ಕಟ್ಟುತ್ತೇವೆ ಎಂದು ರೈತರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.