ಯಾದಗಿರಿ: ಬೆಂಗಳೂರಿನಿಂದ ನಾಂದೇಡಕ್ಕೆ ತೆರಳುವ ಲಿಂಕ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಗುರುವಾರ ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಯಾಗಿತ್ತು.
ರೈಲಿನ ಗಾಲಿಗಳ ಬಳಿ ರಬ್ಬರ್ ಬುಷ್‌ಗಳಿದ್ದು, ಬಿಸಿಲಿನ ತಾಪ ಹಾಗೂ ಹೆಚ್ಚಿನ ಒತ್ತಡದಿಂದಾಗಿ ಅವುಗಳಲ್ಲಿ ಬೆಂಕಿ ಕಾಣಿಸಿಕೊಂಡಿತು. ಎಂಜಿನ್ ನಂತರ ಮೊದಲ ಬೋಗಿ ಇದಾಗಿದ್ದು, ಆತಂಕದ ಸ್ಥಿತಿ ನಿರ್ಮಾಣವಾಗಿತ್ತು.
ರೈಲು, ಯಾದಗಿರಿ ನಿಲ್ದಾಣ ಪ್ರವೇಶಿಸುತ್ತಿದ್ದಂತೆಯೇ ಪ್ರಯಾಣಿಕರು ಬೋಗಿಯಿಂದ ಇಳಿದರು.
ನಂತರ ರೈಲ್ವೆ ನಿಲ್ದಾಣ ವ್ಯವಸ್ಥಾಪಕರು, ಸಿಬ್ಬಂದಿ ಬೆಂಕಿ ನಂದಿಸಿದರು. ನಂತರ ರೈಲು ನಾಂದೇಡದತ್ತ ತೆರಳಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.