ADVERTISEMENT

ವಿಟ್ಲದಲ್ಲಿ ‘ಹನಿಟ್ರ್ಯಾಪ್’: ಉದ್ಯಮಿಯ ಕಾರು, ನಗದು ದೋಚಿ ಪರಾರಿ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2017, 19:30 IST
Last Updated 21 ಅಕ್ಟೋಬರ್ 2017, 19:30 IST

ವಿಟ್ಲ: ವಿಟ್ಲದ ಕುಡ್ತಮುಗೇರು ಬಳಿ ‘ಹನಿಟ್ರ್ಯಾಪ್’ ಪ್ರಕರಣಯೊಂದು ಬೆಳಕಿಗೆ ಬಂದಿದ್ದು, ಉದ್ಯಮಿಯೊಬ್ಬರ ಮೇಲೆ ತೀವ್ರವಾಗಿ ಹಲ್ಲೆ ನಡೆಸಿರುವ ತಂಡ ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗಿದೆ.

ವಿಟ್ಲ ಪಡ್ನೂರು ಗ್ರಾಮದ ಪರ್ತಿಪ್ಪಾಡಿ ನಿವಾಸಿ ಮಹಮ್ಮದ್ ಹನೀಫ್(32) ಹಲ್ಲೆಗೊಳಗಾದವರು. ಕೆಲವು ತಿಂಗಳಿನಿಂದ ಫೇಸ್‌ಬುಕ್‌ನಲ್ಲಿ ಪರಿಚಯವಾದ ಯುವತಿಯೊಬ್ಬಳಿಂದ ಈ ವಂಚನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ತಾಯಿಗೆ ಅಸೌಖ್ಯ, ಹಣ ಬೇಕು’ ಎಂದು ಕೇಳಿದ ಯುವತಿಯ ಮಾತಿನಂತೆ ಹನೀಫ್‌ ಯುವತಿಯನ್ನು ಭೇಟಿಯಾಗಿದ್ದರು. ಸ್ನೇಹಿತೆಯ ಜತೆ ಹನೀಫ್‌ನನ್ನು ಕಳುಹಿಸಿದ ಯುವತಿ, ತಾನು ದ್ಚಿಚಕ್ರ ವಾಹನದಲ್ಲಿ ಹಿಂದಿನಿಂದ ಬರುವುದಾಗಿ ತಿಳಿಸಿದ್ದಳು. ಹನೀಫ್‌ ಅವರು ಯುವತಿಯ ಜತೆಯಲ್ಲಿ ಮನೆಗೆ ತೆರಳುತ್ತಿದ್ದಂತೆಯೇ 6 ಜನರ ತಂಡ ಹಲ್ಲೆ ನಡೆಸಿ ಯುವತಿ ಜತೆ ಬೆತ್ತಲೆ ನಿಲ್ಲಿಸಿ ವಿಡಿಯೊ ಹಾಗೂ ಫೋಟೊ ತೆಗೆದು ₹5 ಲಕ್ಷ ಹಣ ನೀಡುವಂತೆ ಬ್ಲ್ಯಾಕ್ ಮೇಲೆ ಮಾಡಿದೆ. ಜತೆಗೆ ಹನೀಫ್‌ ಅವರ 7 ಪವನ್ ಚಿನ್ನ, ನಗದು, ಪಾಸ್‍ಪೋರ್ಟ್, ವಾಚ್, ಮೊಬೈಲ್ ಮತ್ತು ಸ್ವಿಪ್ಟ್ ಕಾರನ್ನು ದೋಚಿ ಪರಾರಿಯಾಗಿದೆ ಎಂದು ವಿಟ್ಲ ಪೊಲೀಸ್ ಠಾಣೆಗೆ ನೀಡಲಾದ ದೂರಿನಲ್ಲಿ ತಿಳಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.