ADVERTISEMENT

ವಿಲ್ಲುಪುರಂ ಎಕ್ಸ್‌ಪ್ರೆಸ್ ರೈಲಿನ ವೇಳೆ 7 ರಿಂದ ಬದಲಾವಣೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2012, 19:30 IST
Last Updated 4 ಜನವರಿ 2012, 19:30 IST

ಹುಬ್ಬಳ್ಳಿ: ಬೆಂಗಳೂರು- ವಿಲ್ಲುಪುರಂ ವಿಶೇಷ ಎಕ್ಸ್‌ಪ್ರೆಸ್ ರೈಲಿನ (ರೈಲು ಸಂಖ್ಯೆ 06541) ವೇಳೆಯನ್ನು ಬದಲಾಯಿಸಲಾಗಿದೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ.

ಬೆಂಗಳೂರಿನಿಂದ ರಾತ್ರಿ 11 ಗಂಟೆಗೆ ಹೊರಡುತ್ತಿದ್ದ ರೈಲು ಇದೇ 7ರಿಂದ ಸಂಜೆ 6.50ಕ್ಕೆ ಹೊರಡಲಿದ್ದು ಮರುದಿನ ಬೆಳಿಗ್ಗೆ 7.45ಕ್ಕೆ ವಿಲ್ಲುಪುರಂ ತಲುಪಲಿದೆ.

ವಿಲ್ಲುಪುರಂನಿಂದ ಮುಂಜಾನೆ 3 ಗಂಟೆಗೆ ಹೊರಡುವ ರೈಲು ಸಂಜೆ 7 ಗಂಟೆಗೆ ಬೆಂಗಳೂರು ಕಂಟೋನ್ಮೆಂಟ್ ತಲುಪಿ 7.02ಕ್ಕೆ ಹೊರಡಲಿದೆ ಎಂದು ತಿಳಿಸಲಾಗಿದೆ.

ಉರುಲಿ ನಿಲ್ದಾಣದಲ್ಲಿ ನಿಲುಗಡೆ: ಪುಣೆಯ ಪ್ರಯಾಗಧಾಮ ಟ್ರಸ್ಟ್‌ಗೆ ಭೇಟಿ ನೀಡುವವರ ಅನುಕೂಲಕ್ಕಾಗಿ ಕೆಲವು ರೈಲುಗಳಿಗೆ ಉರುಲಿ ನಿಲ್ದಾಣದಲ್ಲಿ ಒಂದು ನಿಮಿಷ ನಿಲುಗಡೆ ಒದಗಿಸಲಾಗುವುದು ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.

ವಾಸ್ಕೊ- ನಿಜಾಮುದ್ದೀನ್ ವಾಸ್ಕೊ ನಡುವೆ ಸಂಚರಿಸುವ ಗೋವಾ ಎಕ್ಸ್‌ಪ್ರೆಸ್‌ಗೆ (ರೈಲು ಸಂಖ್ಯೆ 12779 ಹಾಗೂ 12780) ಇದೇ 17ರ ವರೆಗೆ, ಮುಂಬೈ- ಬೆಂಗಳೂರು- ಮುಂಬೈ ಉದ್ಯಾನ ಎಕ್ಸ್‌ಪ್ರೆಸ್‌ಗೆ (ರೈಲು ಸಂಖ್ಯೆ 16529 ಹಾಗೂ 16530) ಇದೇ 10ರಿಂದ 18ರ ವರೆಗೆ, ಮೈಸೂರು- ನಿಜಾಮುದ್ದೀನ್- ಮೈಸೂರು ಸ್ವರ್ಣ ಜಯಂತಿ ಎಕ್ಸ್‌ಪ್ರೆಸ್‌ಗೆ (ರೈಲು ಸಂಖ್ಯೆ 12781 ಹಾಗೂ 12782) ಇದೇ 9ರಿಂದ 14ರ ವರೆಗೆ ನಿಲುಗಡೆ ಒದಗಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.