ADVERTISEMENT

ಶಿವರಾಮೇಗೌಡ ಪುತ್ರಿಯ ವಿವಾಹದ ವಿಡಿಯೊ ಆಮಂತ್ರಣದ ಬಗ್ಗೆ ಸಿ.ಎಂ. ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2017, 8:46 IST
Last Updated 7 ಡಿಸೆಂಬರ್ 2017, 8:46 IST
ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ   

ಶಿರಸಿ: ನಾಗಮಂಗಲದ ಮಾಜಿ ಶಾಸಕ ಎಲ್‌.ಆರ್‌. ಶಿವರಾಮೇಗೌಡ ಪುತ್ರಿಯ ವಿವಾಹದ ವಿಡಿಯೊ ಆಮಂತ್ರಣದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.

ಶಿರಸಿಯಲ್ಲಿ ಗುರುವಾರ ಮಾತನಾಡಿದ ಅವರು, ‘‌ಮದುವೆಯಲ್ಲಿ ಸಂಪತ್ತಿನ ತೋರ್ಪಡಿಕೆ ಸರಿಯಲ್ಲ. ಇದು ಸಂಪತ್ತಿನ ಕೆಟ್ಟ ರೀತಿಯ ಪ್ರದರ್ಶನ. ನಾನಿದನ್ನು ಮೊದಲಿಂದಲೂ ವಿರೋಧಿಸಿಕೊಂಡು ಬಂದಿದ್ದೇನೆ. ರಾಜಕಾರಣಿ ಬೇರೆಯವರಿಗೆ ಮಾದರಿಯಾಗಿರಬೇಕು’ ಎಂದು ಹೇಳಿದರು.

ನಾಗಮಂಗಲ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎಲ್‌.ಆರ್‌. ಶಿವರಾಮೇಗೌಡ ಅವರ ಪುತ್ರಿಯ ವಿವಾಹದ ವಿಡಿಯೊ ಆಮಂತ್ರಣ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು.

ADVERTISEMENT

₹ 148 ಕೋಟಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ
ಶಿರಸಿ ಸಿದ್ದಾಪುರ ವಿಧಾನಸಭಾ ಕ್ಷೇತ್ರದ 56 ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವೇರಿಸಿದರು. ₹ 148 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ರಿಮೋಟ್ ಒತ್ತುವ ಮೂಲಕ ಏಕಕಾಲಕ್ಕೆ ಚಾಲನೆ ನೀಡಿದರು. ಸಚಿವರಾದ ಆರ್.ವಿ. ದೇಶಪಾಂಡೆ,  ಎಚ್.ಸಿ. ಮಹಾದೇವಪ್ಪ ಇದ್ದರು.
*
‘ಉತ್ತರ ಕನ್ನಡದ ಹೊನ್ನಾವರದಲ್ಲಿ ನಡೆದ ಘಟನೆ ಆಕಸ್ಮಿಕ. ಅದಕ್ಕೆ ಕೋಮುಗಲಭೆ ಬಣ್ಣ ಹಚ್ಚಬೇಡಿ’
– ಸಿದ್ದರಾಮಯ್ಯ

ಇದನ್ನೂ ಓದಿ...
ವೈರಲ್ ವಿಡಿಯೊ: ಮಾಜಿ ಶಾಸಕ ಶಿವರಾಮೇಗೌಡ ಪುತ್ರಿ ವಿವಾಹದ ವಿಡಿಯೊ ಆಮಂತ್ರಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.