ADVERTISEMENT

ಶೆಡ್‌ಗೆ ವಿದ್ಯುತ್ ಸ್ಪರ್ಶ ಅಕ್ಕ ತಮ್ಮ ಸಾವು

​ಪ್ರಜಾವಾಣಿ ವಾರ್ತೆ
Published 5 ಜೂನ್ 2018, 6:39 IST
Last Updated 5 ಜೂನ್ 2018, 6:39 IST
ಶೆಡ್‌ಗೆ ವಿದ್ಯುತ್ ಸ್ಪರ್ಶ ಅಕ್ಕ ತಮ್ಮ ಸಾವು
ಶೆಡ್‌ಗೆ ವಿದ್ಯುತ್ ಸ್ಪರ್ಶ ಅಕ್ಕ ತಮ್ಮ ಸಾವು   

ಕಲಬುರ್ಗಿ: ಅಫಜಲಪುರ ತಾಲ್ಲೂಕು ಮಾಶಾಳ ಗ್ರಾಮದಲ್ಲಿ ಟಿನ್ ಶೀಟ್ ಶೆಡ್‌ಗೆ ವಿದ್ಯುತ್ ತಗುಲಿ ಅಕ್ಕ ತಮ್ಮ ಮೃತಪಟ್ಟಿದ್ದಾರೆ.

ತಿಪ್ಪವ್ವ (65) ಮತ್ತು ನರಸಪ್ಪ ಕಿಣಗಿ(60) ಮೃತಪಟ್ಟವರು.

ತಿಪ್ಪವ್ವ ಸ್ನಾನಕ್ಕೆ ಹೋದ ವೇಳೆಯಲ್ಲಿ ಶೆಡ್‌ಗೆ ವಿದ್ಯುತ್ ತಗುಲಿದೆ. ಈ ವೇಳೆ ರಕ್ಷಿಸಲು ಹೋದ ನರಸಪ್ಪ ಅವರಿಗೂ ವಿದ್ಯುತ್ ತಾಗಿದೆ. ವಿಷಯ ಅರಿತು ಸ್ಥಳಕ್ಕೆ ದೌಡಾಯಿಸಿದ ಗ್ರಾಮಸ್ಥರುವಿದ್ಯುತ್ ಸಂಪರ್ಕ ಕಡಿತಗೊಳಿಸಿ ಶವಗಳನ್ನು ಹೊರತೆಗೆದಿದ್ದಾರೆ.

ADVERTISEMENT

ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.