ADVERTISEMENT

ಸಂವಿಧಾನದ ತಿದ್ದುಪಡಿ ಹೇಗೆ?

​ಪ್ರಜಾವಾಣಿ ವಾರ್ತೆ
Published 9 ಜೂನ್ 2017, 19:32 IST
Last Updated 9 ಜೂನ್ 2017, 19:32 IST
ಸಂವಿಧಾನದ ತಿದ್ದುಪಡಿ ಹೇಗೆ?
ಸಂವಿಧಾನದ ತಿದ್ದುಪಡಿ ಹೇಗೆ?   

ಸಂವಿಧಾನವು ಆರಂಭವಾದಾಗಿನಿಂದ ಇಲ್ಲಿಯವರೆಗೆ 101 ಬಾರಿ ತಿದ್ದುಪಡಿ ಮಾಡಲಾಗಿದೆ. ಆರಂಭದಲ್ಲಿದ್ದ 395 ವಿಧಿ (ಆರ್ಟಿಕಲ್‌) ಈಗ 448ಕ್ಕೆ ಏರಿದೆ. ಅದೇ ರೀತಿ 22ವಿಭಾಗಗಳು 25ಕ್ಕೆ ಏರಿದ್ದು, ಮೊದಲಿದ್ದ ಎಂಟು ಶೆಡ್ಯೂಲ್‌ಗಳು 12ಕ್ಕೆ ಏರಿವೆ. 

ತಿದ್ದುಪಡಿಯನ್ನು ಹೇಗೆ ಮಾಡಬೇಕು ಎಂಬ ಬಗ್ಗೆ 368ನೇ ವಿಧಿಯಲ್ಲಿ ಸೂಚಿಸಲಾಗಿದೆ. ತಿದ್ದುಪಡಿಗೂ ಮುನ್ನ ಮಸೂದೆಯನ್ನು  ಸಂಸತ್ತಿನ ಯಾವುದಾದರೊಂದು ಸದನದಲ್ಲಿ ಮಂಡಿಸಬೇಕು. ಆ ಸದನದ ಒಟ್ಟು ಸದಸ್ಯರ ಬಹುಮತದಿಂದ ಮತ್ತು ಆ ಸದನದ ಸದಸ್ಯರ ಪೈಕಿ ಹಾಜರು ಇರುವ ಸದಸ್ಯರ ಮೂರನೆಯ ಎರಡು ಭಾಗಕ್ಕೆ ಕಡಿಮೆಯಿಲ್ಲದಂತೆ ಮತ ಬರಬೇಕು.

ನಂತರ ಅದನ್ನು ರಾಷ್ಟ್ರಪತಿಯವರ ಅನುಮತಿಗೆ ಕಳುಹಿಸಬೇಕು. ಆದರೆ, ರಾಷ್ಟ್ರಪತಿಗಳ ಚುನಾವಣೆಗೆ ಸಂಬಂಧಿಸಿದ (54, 55ನೇ ವಿಧಿ), ಕಾರ್ಯಾಂಗ ಅಧಿಕಾರ ವ್ಯಾಪ್ತಿ (73, 162ನೇ ವಿಧಿ), ಹೈಕೋರ್ಟ್‌ಗೆ ಸಂಬಂಧಿಸಿದ ವಿಷಯಗಳು (241ನೇ ವಿಧಿ) ಸೇರಿದಂತೆ ಕೆಲವೊಂದು ವಿಧಿಗಳಲ್ಲಿ ತಿದ್ದುಪಡಿ ಮಾಡುವುದಿದ್ದರೆ ಮಸೂದೆಯನ್ನು ಅನುಮತಿಗಾಗಿ ರಾಷ್ಟ್ರಪತಿಯವರಿಗೆ ಒಪ್ಪಿಸುವುದಕ್ಕೆ ಮುಂಚೆ ಒಟ್ಟೂ ರಾಜ್ಯಗಳ ಅರ್ಧಕ್ಕಿಂತ ಅಧಿಕ ರಾಜ್ಯಗಳ ವಿಧಾನಮಂಡಲ, ಅದನ್ನು ಅಂಗೀಕರಿಸಿ ನಿರ್ಣಯ ಮಂಡಿಸಬೇಕು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.