ADVERTISEMENT

ಸಚಿವ ಮಹದೇವಪ್ಪ ವಿರುದ್ಧ ಅವಾಚ್ಯ ಶಬ್ದಗಳಲ್ಲಿ ನಿಂದಿಸಿದ ಕಾಂಗ್ರೆಸ್ ಅಭ್ಯರ್ಥಿ?: ಆಡಿಯೊ ವೈರಲ್

​ಪ್ರಜಾವಾಣಿ ವಾರ್ತೆ
Published 14 ಮೇ 2018, 7:42 IST
Last Updated 14 ಮೇ 2018, 7:42 IST
ಸಿ.ಎಸ್‌.ಪುಟ್ಟೇಗೌಡ (ಸಂಗ್ರಹ ಚಿತ್ರ)
ಸಿ.ಎಸ್‌.ಪುಟ್ಟೇಗೌಡ (ಸಂಗ್ರಹ ಚಿತ್ರ)   

ಹಾಸನ: ಸಚಿವ ಎಚ್.ಸಿ.ಮಹಾದೇವಪ್ಪ ವಿರುದ್ಧ ಶ್ರವಣಬೆಳಗೊಳದ ಕಾಂಗ್ರೆಸ್ ಅಭ್ಯರ್ಥಿ ಸಿ.ಎಸ್.ಪುಟ್ಟೇಗೌಡ ಅವಾಚ್ಯ ಶಬ್ದಗಳಲ್ಲಿ ನಿಂದಿಸಿದ್ದಾರೆ ಎನ್ನಲಾದ ಆಡಿಯೊ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕಾರ್ಯಕರ್ತರೊಬ್ಬರ ಜತೆ ದೂರವಾಣಿಯಲ್ಲಿ ಮಾತನಾಡಿದ ಪುಟ್ಟೇಗೌಡ ಸಚಿವರನ್ನು ನಿಂದಿಸಿದ್ದಾರೆ ಎನ್ನಲಾಗಿದೆ.

ಸಂಭಾಷಣೆ

ADVERTISEMENT

ಪುಟ್ಟೇಗೌಡ: ಹಾಸನಕ್ಕೆ ಬರಬೇಕಿದ್ದ ಕಾಂಗ್ರೆಸ್‌ ಪಕ್ಷದ ಅನುದಾನವನ್ನು ನುಂಗಿ ಹಾಕಿದ್ದಾನೆ. ಜೆಡಿಎಸ್‌ ವರಿಷ್ಠ ದೇವೇಗೌಡರ ಜತೆ ಹೊಂದಾಣಿಕೆ ಮಾಡಿಕೊಳ್ಳಲು ಮುಂದಾಗಿದ್ದಾನೆ. ₹3.5 ಕೋಟಿ ದುಡ್ಡು ಕೊಡಲು ಮಹದೇವಪ್ಪಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದರು. ಆದರೆ, ಈ ಸೂ... ದುಡ್ಡು ಇಟ್ಟುಕೊಂಡು ಮಂಡ್ಯ, ಹಾಸನದವರಿಗೆ ಕೈ ಕೊಟ್ಟವ್ನೆ

ಕಾರ್ಯಕರ್ತ: ಯಾರು?

ಪುಟ್ಟೇಗೌಡ: ಮಹದೇವಪ್ಪ.

ಪುಟ್ಟೇಗೌಡ: ನಾವು ನಿನ್ನೆ ಈ ವಿಷ್ಯ ಹೇಳಂಗಿಲ್ಲ. ಹೇಳಿದ್ರೆ ಎಸ್‌ಟಿ ಜನಾಂಗಾದವರಿಗೆ ಗೊತ್ತಾಗಿ ಇನ್ನೇನಾದ್ರು  ಆಗುತ್ತೆ ಅಂತ ಬಾಯ್ ಹೊಲ್ಕಂಡ್ ಸುಮ್ನಾದ್ವಿ.

ಕಾರ್ತಕರ್ತ: ಮಹದೇವಪ್ಪ ಹತ್ರ ದುಡ್ಡಿದ್ದಿದ್ದ?

ಪುಟ್ಟೆಗೌಡ: ಹಾ.. ಮಹಾದೇವಪ್ಪ ಇಲ್ಲಿ ಉಸ್ತುವಾರಿ ಸಚಿವನಾಗಿದ್ನಲ್ಲ, ಮಂಡ್ಯ ಹಾಸನ ಎರಡಕ್ಕೂ ಪಿಡಬ್ಲ್ಯುಡಿ ಮಂತ್ರಿ ಬೇರೆ ಆಗಿದ್ನಲ್ಲ, ದುಡ್ಡು ಕೊಡಯ್ಯ ಅಂತ ದುಡ್ಡುಗಿಡ್ಡು ಎಲ್ಲ ಅವ್ನತ್ರ ಇದು ಮಾಡವ್ರೆ. ಇವ್ನೇನೇನು ಮಾಡೌನೆ, ನಮ್ಮನೆ ಐಟಿ ರೇಡ್ ಮಾಡ್ ಬುಟ್ಟವ್ರೆ ಅಂತ ಹೇಳ್ಬಿಟ್ಟಿದ್ದ. ಯಾವ ಐಟಿ ರೇಡ್ ಇಲ್ಲ, ಪೈಟಿ ರೇಡೂ ಇಲ್ಲ, ಸುಮ್ನೆ ಸುಳ್ಳು ಸುದ್ದಿ ಹಬ್ಸಿ ನಮಗೆಲ್ಲಾ ನಾಮ ಹಾಕ್ಬುಟವ್ನೆ.

ಸಮ್ಮಿಶ್ರ ಸರ್ಕಾರ ಬಂದ್ರೆ ದೇವೇಗೌಡ್ರು ನಿನ್ನ ಮುಖ್ಯಮಂತ್ರಿ ಮಾಡಿದ್ರೆ ಸಪೋರ್ಟ್ ಮಾಡ್ತಿವಿ, ಇಲ್ದೊದ್ರೆ   ಮಾಡಲ್ಲ ಅಂತ ಹಠ ಹಿಡಿತಿವಿ ಅಂತ ಈ ನನ್ ಮಗಂಗೆ ಆಸೆ ಹುಟ್ಸುಬಿಟವ್ರೆ. ಇದು ಸತ್ಯ!!

ಕಾರ್ಯಕರ್ತ: ಯಾರು ಸಿದ್ದರಾಮಯ್ಯುನವರಾ?

ಪುಟ್ಟೆಗೌಡ: ನಿನ್ನೆ ಹೇಳಂಗಿಲ್ಲ,  ಹರಿಜನ ಹುಡುಗ್ರು ಮುಂದೆ ಮಾತಾಡಿ ಆದೇನಾಗುತ್ತೋ ಅಂತ ಭಯಪಟ್ವಿ. ಯಾರು ಮಾತಾಡ್ಲಿಲ್ಲ.

ಕಾರ್ಯಕರ್ತ: ಅಲ್ಲ ಕಣಣ್ಣ ನಿಮ್ಮು ದುಡ್ಡು ಎಷ್ಟು ಹಾಕಿದ್ರಿ? ನಿಮ್ಮ ಸ್ವಂತ ದುಡ್ಡು ಎಷ್ಟಾಕಿದ್ರಿ?

ಪುಟ್ಟೆಗೌಡ: ನಿನ್ನೆ ಅವನಿಲ್ಲ ಅಂದ್ ತಕ್ಷಣ ಒಂದು ಮುಕ್ಕಾಲಿಂದ ಎರಡು ಕೋಟಿ ತರ್ಸಿವಿ! ಅವನಿಲ್ಲ ಅಂದ್ ತಕ್ಷಣ!

ಪುಟ್ಟೆಗೌಡ: ಲೇಟಾಗ್ಬುಡ್ತಲ್ಲ...

ಕಾರ್ಯಕರ್ತ: ಬರೀ ₹50 ಲಕ್ಷ ಬಾಗೂರು ಹೋಬಳಿಗೆ ಹೊಡ್ತಿದಿದ್ರೆ , ಕಾರ್ಯಕರ್ತರೆಲ್ಲ ಗೆದ್ದು ಕೊಡರು.

ಪುಟ್ಟೆಗೌಡ: ನಮ್ಮ ತಲೆ ಒಳಗೆ ಏನಿತ್ತು ಅಂದ್ರೆ, ಒಂದು ಕೋಟಿನ 100 ಊರಿಗೆ, ₹ 1ಲಕ್ಷದಂಗೆ 200 ಜನಕ್ಕೆ ಹೊಡೆಯೋದು ಅಂತ. ಇನ್ನ ₹50 ಲಕ್ಷನ ಸ್ತ್ರೀಶಕ್ತಿ ಅವು ಇವಕ್ಕೆ ಹೊಡೆಯೋದು. ₹ 50ಲಕ್ಷನ ಲೀಡ್ರಿಗೆ ಹಂಚೊದು ಅಂತ ನಮ್ಮ ಲೆಕ್ಕ ಇದ್ದಿದ್ದು. ಇದನ್ನ ಹೇಳಂಗಿಲ್ಲ. ಮಾಹದೇವಪ್ಪನ ವಿಚಾರ ಹೇಳಿ ಮತ್ತೆ ಹರಿಜನ ಎಲ್ಲಾ ರಿವರ್ಸ್ ಆದ್ರೆ ಅಂತ ಹೆದ್ರಿಕೊ ಬಿಟ್ವಿ ನಾವು.

ಕಾರ್ಯಕರ್ತ: ಈಗ ಎರಡು ಕೋಟಿಲಿ ಕೆಲ್ಸ ಮುಗ್ಸಿ ಹಾಕಿದ್ರಿ ಅತ್ಲೇಗಿ.

ಪುಟ್ಟೆಗೌಡ: ನಾನು ಒಬ್ಬ ಅಲ್ಲ. ನನಗೆ ಇಷ್ಟಾರು ಆಗಿದೆ. ಸಕಲೇಪುರ ಗಿಕ್ಲೇಶಪುರ ಎಲ್ಲರಿಗೂ ನಾಮ ಹಾಕಿದರೆ.

ಕಾರ್ಯಕರ್ತ: ಆದ್ರೆ ಒಂದೇನಾಯಿತೆ ಗೊತ್ತಣ್ಣ, ಈಡೀ ಬಾಗೂರು ಹೋಬಳಿ ಕಾಂಗ್ರೆಸ್ ಕಾರ್ಯಕರ್ತರು ಸತ್ತೊದ್ರು. ಸತ್ತೊಗಿ ನಿಮ್ಮನ್ನ ನಂಬ್ಕೊಂಡ್ರು. ನೀವು ₹15 ಕೋಟಿ ನನ್ನ ದುಡ್ಡು ಖರ್ಚು ಮಾಡ್ತಿನಿ ಅಂತ ಅವತ್ತು ಹೇಳಿರಿ, ಎಲ್ಲರೂ ಏನ್ ಅನ್ಕಕಂಡ್ರು, ಪುಟ್ಟೆಗೌಡ್ರು ದುಡ್ಡು ಖರ್ಚು ಮಾಡೇ ಮಾಡ್ತಾರೆ ಅಂತ ತಿಳ್ಕಂಡ್ರು.

ಪುಟ್ಟೆಗೌಡ: ಇರ್ಲಿ ಅಲ್ಲಪ ಅಧಿಕಾರ ಇದ್ದು ಪಾರ್ಟಿ ಪಂಡು ಕೊಡದೆ ಇದ್ರೆ ಹೆಂಗೆಳು?

ಕಾರ್ಯಕರ್ತ: ಹೆಂಗೆ ಅಂದ್ರೆ! ಸ್ವಂತ ಬಂಡವಾಳ ಹಾಕೊ ಶಕ್ತಿ ಇದ್ರೆ ಬರಬೇಕು ಇಲ್ಲಾಂದ್ರೆ ಬರಬಾರದು! ಯಾರಾದ್ರು ಒಂದು ಕೋಟಿ ಎರಡು ಕೋಟಿ ದುಡ್ ಕೊಡರು! ನೀವು ಇಸ್ಕಂಡು ಸುಮ್ನಿದಿದ್ರೆ ಏನು ಅತಿರ್ಲಿಲ್ಲ!

ಪುಟ್ಟೆಗೌಡ: ಮಾತಾಡನ ಬುಡಿ ಬೆಳಗ್ಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.